Connect with us

LATEST NEWS

ಒಂದೇ ಕುಟುಂಬದ ನಾಲ್ವರಿಗೆ ಒಂದೇ ರೀತಿಯ ವಿಚಿತ್ರ ವ್ಯಾದಿ, ಬೇಕಾಗಿದೆ ದಾನಿಗಳ ನೆರವು…

ಕಾರ್ಕಳ, ಜನವರಿ 09: ಇದು ಅಸಾಹಯಕತೆಯ ಪರಮಾವಧಿ. ಒಂದೇ ಕುಟುಂಬದ ನಾಲ್ವರಿಗೆ ಒಂದೇ ರೀತಿಯ ವಿಚಿತ್ರ ವ್ಯಾದಿ. ಕುಂತಲ್ಲೇ ಕೂತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡದೇ ಈ ಕುಟುಂಬ ಅಸಾಹಯಕತೆಯಲ್ಲಿದೆ. ಯಾರಾದರೂ ಸಹಾಯ ಮಾಡುತ್ತಾರೋ ಎಂಬ ನಿರೀಕ್ಷೆಯಲ್ಲಿದ್ದಾರೆ.

ನಾಗರೀಕ ಸಮಾಜದಲ್ಲಿ ಅನಾಗರೀಕರಾಗಿ ಬದುಕುತ್ತಿರುವ ಇಂತಹ ಕುಟುಂಬ ಬೆಳಕಿಗೆ ಬಂದದ್ದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿ . ಒಂದೇ ಮನೆಯಲ್ಲಿ ಇರುವ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು ವರ್ಷಗಳಿಂದ ಹಾಸಿಗೆಯಲ್ಲಿ ದಿನಗಳ ಕಳೆಯುತ್ತಿದ್ದಾರೆ . ಮನೆಯಲ್ಲಿರುವ ನಾಲ್ವರಿಗೂ ಸೊಂಟ, ಕಾಲಿನ ಸ್ವಾಧೀನತೆ ಇಲ್ಲದೇ ತಮ್ಮ ನಿತ್ಯದ ಕಾರ್ಯ ಮಾಡಲಾಗದೇ ಸಂಕಷ್ಟದಲ್ಲಿದ್ದು ಊಟಕ್ಕೂ ಪರಿತಪಿಸುತ್ತಿರುವ ಈ ಕುಟುಂಬ ಇದೀಗ ಅಕ್ಷರಶ: ಬೀದಿ ಪಾಲಾಗುವ ಆತಂಕ ಎದುರಾಗಿದೆ.

ಗುಲಾಬಿ ಶೆಟ್ಟಿಗಾರ್ತಿ, (73 ವ), ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್ (37ವ) ಬಾಲಕೃಷ್ಣ ಶೆಟ್ಟಿಗಾರ್ (39ವ), ಗೀತಾ ಶೆಟ್ಟಿಗಾರ್ (32ವ) ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದರೆಂದು ತಿಳಿದುಬಂದಿದೆ.

ಈ ವಿಚಿತ್ರ ಕಾಯಿಲೆಯನ್ನು ಗುಣಪಡಿಸಲು ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಈ ವ್ಯಾಧಿಯು ಗುಣಕಾಣದೆ ಕಂಗಲಾಗಿದ್ದಾರೆ. ಸರಕಾರದಿಂದ ಬರುವ ಪಿಂಚಣಿ 1500 ರೂಪಾಯಿ, ಅನ್ನಭಾಗ್ಯದ ಪಡಿತರ, ಹಾಗೂ ಊರ ಜನರಲ್ಲಿ ಅಂಗಲಾಚಿ ಪಡೆದಿರುವ ನೆರವಿನಿಂದ ಇವರು ದಿನಕಳೆಯುತ್ತಿದ್ದಾರೆ. ದುಡಿಯುವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ ಔಷೋಧೋಪಚಾರ ನಡೆಸಲು ಇವರಲ್ಲಿ ಅಸಾಧ್ಯವಾಗಿದೆ. ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿರುವುದೆಂದು ವ್ಯೆದ್ಯರಿಂದ ತಿಳಿದುಬಂದಿದ್ದು ಇಷ್ಟು ದಿನ ಊರವರು ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದರು. ಇದೀಗ ಊರವರ ಸಹಾಯನೂ ಇಲ್ಲದ ಕಾರಣ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ದೊಡ್ಡ ಆಸ್ಪತ್ರೆಗೆ ಹೋಗಲು ಲಕ್ಷಾಂತರರೂ ಖರ್ಚು ಇದ್ದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹಾಗೂ ಅವರ ತಂಡ ಈ ಅಸಾಹಯಕ ಕುಟುಂಬವನ್ನು ಬೆಳಕಿಗೆ ತಂದಿದ್ದಾರೆ. ಹಣ ಖರ್ಚು ಮಾಡಿದರೆ ಈ ಕುಟುಂಬ ಸರಿ ಆಗಬಹುದು ಎಂದು ವೈದ್ಯರು ತಿಳಿಸಿದ್ದು ಅದಕ್ಕೆ ಲಕ್ಷಾಂತರ ರೂ ಖರ್ಚಾಗಲಿದೆ . ಮಾತ್ರವಲ್ಲದೇ ಒಂದೇ ಮನೆಯ ನಾಲ್ವರಿಗೆ ಈ ಸಮಸ್ಯೆ ಇರುವುದರಿಂದ ಪರಿಸ್ಥಿತಿ ಉಲ್ಬಣಿಸಿದೆ. ಇವರಿಗೆ ಬೇರೆ ಯಾರೂ ಸಹಾಯಕ್ಕೆ ಇರದ ಹಿನ್ನಲೆಯಲ್ಲಿ ಅಸಾಹಯಕ ಕುಟುಂಬಕ್ಕೆ ಸಮಾಜವೇ ನೆರವಾಗಬೇಕಿದೆ.

BALAKRISHNA SHETTIGAR
ACOUNT NUMBER: 520191032164420
IFSC CODE: UBIN0902454

ಸಂಪರ್ಕ ಸಂಖ್ಯೆ:- 9611495379

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *