LATEST NEWS
ಡಾಲಿ ಚಾಯ್ ವಾಲಾ ಮಂಗಳೂರಿನವನಾಗಿದ್ದರೆ ಅವನ ಅಂಗಡಿ ಮೇಲೆ ಬುಲ್ಡೋಜರ್ ಹೋಗ್ತಿತ್ತು – ರಾಜ್ ಬಿ ಶೆಟ್ಟಿ
ಮಂಗಳೂರು ಜನವರಿ 22: ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಉದ್ಘಾಟನೆಗೆ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಡಾಲಿ ಚಾಯ್ ವಾಲಾ ಮಂಗಳೂರಿನವನಾಗಿದ್ದರೆ ಅವನ ಅಂಗಡಿ ಮೇಲೆ ಬುಲ್ಡೋಜರ್ ಹರಿಸಿ ಅವನ ಅಂಗಡಿ ಧ್ವಂಸ ಮಾಡುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ.
ಮಂಗಳೂರಿನಲ್ಲಿ ಸ್ಟ್ರೀಟ್ ಫುಡ್ ಫಿಯೆಸ್ಟಾ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಉದ್ಘಾಟನೆಗೆ ಸೋಶಿಯಲ್ ಮಿಡಿಯಾ ಟ್ರೆಂಡ್ ಡಾಲಿ ಚಾಯ್ ವಾಲಾ ನನ್ನು ಸಂಘಟಕರು ಕರೆಸಿದ್ದರು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಪುಟ್ ಪಾತ್ ಮೇಲೆ ಇದ್ದ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬುಲ್ಡೋಜರ್ ಹಾಯಿಸಿ ಧ್ವಂಸ ಮಾಡಲಾಗಿತ್ತು, ಆದರೆ ಅದೇ ರೀತಿ ಬೀದಿ ಬದಿಯಲ್ಲಿ ಚಹಾ ಮಾರಿ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆದ ಡಾಲಿ ಚಾಯ್ ವಾಲಾನನ್ನು ಕರೆಸಿ ಅವನಿಂದ ಉದ್ಘಾಟನೆ ಮಾಡಿಸಿದ್ದಾರೆ.
ಇದೇ ವಿಚಾರಕ್ಕೆ ನಟ ನಿರ್ದೇಶಕ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಸ್ಟೋರಿ ಹಾಕಿದ್ದಾರೆ. ಲಾಲ್ ಬಾಗ್ ಸ್ಟ್ರೀಟ್ ಪುಡ್ ಫೆಸ್ಟ್ ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಆದರೆ, ಡಾಲಿ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು ಎಂದು ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.