Connect with us

LATEST NEWS

ಅನ್ನಹಾಕಿದ ಮಾಲಿಕನ ಅಂತಿಮ ಯಾತ್ರೆಯಲ್ಲಿ ನಾಯಿಯ ಬಾಷ್ಟಾಂಜಲಿ

ಅನ್ನಹಾಕಿದ ಮಾಲಿಕನ ಅಂತಿಮ ಯಾತ್ರೆಯಲ್ಲಿ ನಾಯಿಯ ಬಾಷ್ಟಾಂಜಲಿ

ಮಂಗಳೂರು ಅಗಸ್ಟ್ 30: ತನಗೆ ಅನ್ನ ಹಾಕಿದ ಮಾಲೀಕನ ಅಂತಿಮ ಯಾತ್ರೆಯಲ್ಲಿ ಯಜಮಾನನ ಪಾರ್ಥಿವ ಶರೀರದ ಮುಂದೆ ರೋದಿಸಿ ತನ್ನ ಅಂತಿಮ ನಮನ ಸಲ್ಲಿಸಿದೆ.

ಮಂಗಳೂರಿನ ಕಾವೂರಿನಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಹೋಟೆಲ್ ಮಾಲಕ ಲಕ್ಷ್ಮಣ್ ಶೆಟ್ಟಿ ಯವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಅವರ ಹೋಟೆಲಿನ ಪಕ್ಕದ ಕಾವೂರ್ ಟವರ್ಸ್ ಎದುರುಗಡೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮನಮನಕ್ಕಾಗಿ ಇರಿಸಲಾಗಿತ್ತು.

ಈ ಸಂದರ್ಭದಲ್ಲಿ ಕುಟುಂಬಸ್ಥರು, ಗೆಳೆಯರು ಸೇರಿದಂತೆ ಹಲವರು ಲಕ್ಷ್ಮಣ ಅವರ ಅಂತಿಮ ದರ್ಶನಕ್ಕೆ ಬಂದಿದ್ದರು.
ಆದರೆ ಪಾರ್ಥಿವ ಶರೀರವಿದ್ದ ಆಂಬ್ಯುಲೆನ್ಸ್ ಪಕ್ಕದಲ್ಲೇ ನಾಯಿಯೊಂದು ಮೂಕ ವೇದನೆ ಪಡುತ್ತಿತ್ತು. ಈ ಶ್ವಾನ ಲಕ್ಷ್ಮಣ ಅವರ ಹೋಟೆಲ್ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದು, ಇದಕ್ಕೆ ಲಕ್ಷ್ಮಣ ಅವರು ಅವರು ಪ್ರೀತಿಯಿಂದ ಅನ್ನ ಹಾಕುತ್ತಿದ್ದರು.

ಇದರಿಂದ ಈ ನಾಯಿಗೆ ಲಕ್ಷ್ಮಣ ಅವರ ತುಂಬಾ ಪ್ರೀತಿ. ತನಗೆ ಅನ್ನ ಹಾಕಿದ ಯಜಮಾನ ಇನ್ನು ಇಲ್ಲ ಎನ್ನುವುದು ಗೊತ್ತಾಗಿ, ಲಕ್ಷ್ಮಣ ಅವರ ಶವವಿದ್ದ ಆಂಬ್ಯುಲನ್ಸ್ ಬಳಿ ಬಂದು ಮೂಕ ವೇದನೆ ಅನುಭವಿಸಿದೆ. ಶ್ವಾನದ ನೋವು ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗುವಂತೆ ಕೂಡ ಮಾಡಿದೆ. ವಿಶ್ವಾಸಾರ್ಹತೆಗೆ ನಾಯಿ ಬಿಟ್ಟರೆ ಇನ್ನೊಂದು ಪ್ರಾಣಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಭೀತು ಪಡಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *