Connect with us

LATEST NEWS

ಈಝಿ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ಸಂಭ್ರಮ

ಮಂಗಳೂರು: ಮಂಗಳೂರಿನ ಈಝಿ ಆಯುರ್ವೇದ ಆಸ್ಪತ್ರೆ ಯಲ್ಲಿ ವೈದ್ಯರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಸುಜಾತಾ, ಶಿಲ್ಪಾ, ಚಿತ್ರಾ, ಸುಜಾತಾ, ಚೇತನಾ, ಹಾಗೂ ರಚನಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಆಸ್ಪತ್ರೆಯ ಉಪ ವ್ಯವಸ್ಥಾಪಕಿ ಸರಿತಾ ಅವರು ಸ್ವಾಗತಿಸಿದದರು.


ಆಸ್ಪತ್ರೆಯ ಎಂಡಿ ಡಾ.ಜನಾರ್ದನ ವಿ.ಹೆಬ್ಬಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಪರಿಣಾಮಕಾರಿ ರೋಗಿಗಳ ಆರೈಕೆ ಮತ್ತು ಚಿಕಿತ್ಸಾ ಫಲಿತಾಂಶಗಳನ್ನು ಖಾತರಿಪಡಿಸುವಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ನಡುವಿನ ಪರಸ್ಪರ ಹೂಂದಾಣಿಕೆ ಹಾಗೂ ಸೌಹಾರ್ದತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವಿಗಣೇಶ್ ಮೊಗ್ರ ಮಾತನಾಡಿ ವೈದ್ಯರ ದಿನಾಚರಣೆಯ ಮಹತ್ವದ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು.

ಇಕ್ವಡೊರ್ ನ ಜೊಹಾನಾ ರಾಡ್ರಿಗಸ್ ಮತ್ತು ಆಸ್ಟ್ರಿಯಾದ ಕ್ಯಾಟ್ರಿನ್ ಹಾರ್ಟ್ಮನ್ ಈಝಿ ಆಯುರ್ವೇದ ಆಸ್ಪತ್ರೆಯಲ್ಲಿನ ತಮ್ಮ ಚಿಕಿತ್ಸಾ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ವೈದ್ಯರಿಗೆ ಪ್ರೀತಿಯಿಂದ ಕಿರುಕಾಣಿಕೆಯನ್ನು ನೀಡಲಾಯಿತು.

ಈಝಿ ಆಯುರ್ವೇದ ಸಿಬ್ಬಂದಿ ನಯನಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಸ್ಪತ್ರೆಯ ಮ್ಯಾನೇಜರ್ ಶ್ರೀ ಗೌರೀಶ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಈಝಿ ಆಯುರ್ವೇದ ಆಸ್ಪತ್ರೆಯನ್ನು ಆರೋಗ್ಯ ಸೇವೆಯ ಉತ್ಕೃಷ್ಟತೆಯ ದಾರಿದೀಪವಾಗಿಸುವಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಹೆಚ್ಚಿನ ಮಾಹಿತಿಗಾಗಿ, ಈಝಿ ಆಯುರ್ವೇದ ಆಸ್ಪತ್ರೆಯನ್ನು ಸಂಪರ್ಕಿಸಿ.
ದೂರವಾಣಿ: 8618898900
ವಾಟ್ಸಾಪ್: 8867385567

Share Information
Continue Reading
Advertisement
Click to comment

Leave a Reply

Your email address will not be published. Required fields are marked *