LATEST NEWS
SDPI ಪ್ರತಿಭಟನೆ ವಿರೋಧಿಸಿ ಖಾಸಗಿ ಪ್ರಸೂತಿ ವೈದ್ಯರ ಮುಷ್ಕರ

SDPI ಪ್ರತಿಭಟನೆ ವಿರೋಧಿಸಿ ಖಾಸಗಿ ಪ್ರಸೂತಿ ವೈದ್ಯರ ಮುಷ್ಕರ
ಪುತ್ತೂರು ನವೆಂಬರ್ 10: ಎಸ್.ಡಿ.ಪಿ.ಐ ಸಂಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ಮುಂದೆ ನಡೆಸಿದ ಪ್ರತಿಭಟನೆ ಯನ್ನು ಖಂಡಿಸಿ ಇಂದು ಪುತ್ತೂರು ತಾಲೂಕಿನ ಖಾಸಗಿ ಪ್ರಸೂತಿ ವೈದ್ಯರು ಒಂದು ದಿನದ ಸೇವೆ ರದ್ದುಗೊಳಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ಪ್ರತಿಭಟನೆ ವೇಳೆ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ವೈದ್ಯರ ವಿರುದ್ಧ ಅವಹೇಳನಕಾರಿ ಹಾಗೂ ಬೆದರಿಕೆ ಹೇರುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ವೈದ್ಯರು ಈ ಮುಷ್ಕರ ಕೈಗೊಂಡಿದ್ದಾರೆ.

ವೈದ್ಯರ ಪ್ರತಿಭಟನೆ ಹಿನ್ನಲೆಯಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎನ್ನುವ ದೃಷ್ಟಿಯಿಂದ ಯೂತ್ ಕಾಂಗ್ರೆಸ್ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದೆ.