Connect with us

KARNATAKA

ಕತಾರ್ ಪ್ರಿಯಕರನ ಜೊತೆ ಮದುವೆ ಎಂದಿದ್ದ ಅಯ್ನಾಜ್‌ಳನ್ನು ಸಿಟ್ಟಿಗೆದ್ದ ಪ್ರವೀಣ್ ಚೌಗುಲೆ ಹತ್ಯೆ ಮಾಡಿಬಿಟ್ಟ ಯಾಕೆ ಗೊತ್ತಾ.?!!

ಹಂತಕ ಆರೋಪಿ ಪ್ರವೀಣ್ ಚೌಗುಲೆ ಸರಣಿ ಹತ್ಯೆಗಳ ಬಗ್ಗೆ ಭಯಾನಕ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇದೆಲ್ಲಾ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಬಹಿರಂಗವಾಗಿದೆ.
ಉಡುಪಿ : ನಾಡನ್ನು ತಲ್ಲಣಗೊಳಿಸಿದ್ದ ತಾಯಿ ಮಕ್ಕಳ ಕೊಲೆಗಳ ಉಡುಪಿ ನೇಜಾರು ಹತ್ಯಾಕಾಂಡದ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು ಆರೋಪಿಯ ಚಾರ್ಜ್ ಶೀಟ್ ನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿ ‌ 244 ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಎಫ್ ಎಸ್ ಎಲ್ ವರದಿಯೂ ಕೈ ಸೇರಿದೆ. ಇಷ್ಟಕ್ಕೂ ಹಂತಕ ಆರೋಪಿ ಪ್ರವೀಣ್ ಚೌಗುಲೆ ಸರಣಿ ಹತ್ಯೆಗಳ ಬಗ್ಗೆ ಭಯಾನಕ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇದೆಲ್ಲಾ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಬಹಿರಂಗವಾಗಿದೆ.

 

ಚಾರ್ಜ್ ಶೀಟ್ ನಲ್ಲಿ ಏನಿದೆ..?
ಆರೋಪಿ ಪ್ರವೀಣ್ ಚೌಗುಲೆ ಮತ್ತು ಅಯ್ನಾಜ್ ನಡುವೆ ಆತ್ಮೀಯ ಗೆಳೆತನವಿತ್ತಂತೆ. ಇಬ್ಬರ ಗೆಳೆತನದ ಬಗ್ಗೆ ಪ್ರವೀಣ್ ಪತ್ನಿಗೆ ಅನುಮಾನ ಕಾಡಿತ್ತು. ಈ ಅನುಮಾನದಿಂದಾಗಿ ಪ್ರವೀಣ್ ಚೌಗುಲೆ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ವಿಚಾರ ತಿಳಿದ ಅಯ್ನಾಜ್ ಸಂಪರ್ಕ ಕಡಿದುಕೊಳ್ಳಲು ತೀರ್ಮಾನಿಸಿದ್ದಳು. ಇದೇ ವೇಳೆ ಮೃತ ಅಯ್ನಾಜ್ ಪ್ರಿಯಕರ ಕತಾರ್ ನಿಂದ ವಾಪಸ್ ಬಂದಿದ್ದ. 2023 ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾಪಸ್ ಆಗಿದ್ದ ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಪ್ರವೀಣನಿಗೆ ಅಯ್ನಾಜ್ ಹೇಳಿದ್ದಳು.ಅಯ್ನಾಜ್ ಮತ್ತು ಪ್ರಿಯಕರನ ಗೆಳೆತನದಿಂದ ಪ್ರವೀಣ್ ಚೌಗುಲೆ ವಿಪರೀತ ಸಿಟ್ಟಾಗಿದ್ದ. ನನಗೆ ಸಿಗದ ಅಯ್ನಾಜ್ ಯಾರಿಗೂ ಸಿಗಬಾರದು ಎಂದು ಅದಾಗಲೇ ಕೊಲೆಗೈಯ್ಯಲು ನಿರ್ಧಾರಿಸಿದ್ದ . ಗಮನಾರ್ಹವೆಂದರೆ ಇದೇ ಪ್ರವೀಣ ಈ ಹಿಂದೆಯೂ ಮದುವೆಯಾಗಿದ್ದು ಮುಸ್ಲಿಂ ಯುವತಿಯನ್ನು.. ಫ್ಯಾಮಿಲಿ ಫ್ರೆಂಡ್ ಮುಸ್ಲಿಂ ಯುವತಿಯ ಜೊತೆಯೇ ಪ್ರವೀಣ್ ಚೌಗುಲೆ ಮದುವೆಯಾಗಿದ್ದ. 2009ರಲ್ಲಿ ಕದ್ರಿ ದೇವಸ್ಥಾನದಲ್ಲಿ ರಿಯಾ ಎಂಬಾಕೆಯ ಕೈ ಹಿಡಿದಿದ್ದ ಪ್ರವೀಣ್. ಮದುವೆಯ ನಂತರ ರಿಯಾ ಹೆಸರು ಪ್ರಿಯಾ ಆಗಿ ಬದಲಾವಣೆಯಾಗಿತ್ತು. ಇನ್ನು ಇತ್ತ, ಅಯ್ನಾಜ್ ಜೊತೆ ಪ್ರವೀಣನಿಗೆ ಇದ್ದ ಸಂಬಂಧ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಅವರಿಬ್ಬರನ್ನೂ ಕೊಲೆ ಮಾಡಲು ಪ್ಲಾನ್ ಹಾಕಿಕೊಂಡು ಬಂದಿದ್ದ ಪ್ರವೀಣ್ ಚೌಗುಲೆ. ಆರೋಪಿ ಪ್ರವೀಣ್ ಚೌಗುಲೆ ಸ್ನ್ಯಾಪ್ ಚಾಟ್ ಮೂಲಕ ಅಯ್ನಾಜ್ ಮನೆಯ ವಿಳಾಸ ತಿಳಿದುಕೊಂಡು ಸೀದಾ ಉಡುಪಿಯ ಆಕೆಯ ಮನೆಗೆ ಎಂಟ್ರಿ ಕೊಟ್ಟಿದ್ದ. ನವೆಂಬರ್ 12 ರಂದು ಏಕಾಏಕಿ ಮನೆಗೆ ನುಗ್ಗಿದ್ದ ಆರೋಪಿ ಪ್ರವೀಣ್ ಚೌಗುಲೆ, ತಾಯಿ ಹಸೀನಾ ಮತ್ತು ಆಕೆಯ ಮೂವರು ಮಕ್ಕಳಾದ ಆಫ್ನಾನ್, ಐನಾಜ್ ಹಾಗೂ ಆಸೀಮ್ ರನ್ನು ಚೂರಿಯಿಂದ ಇರಿದು ಕೊಂದಿದ್ದ. ಈ ಪೈಕಿ ಐನಸ್ ಬಗ್ಗೆ ಏಕಮುಖ ಪ್ರೀತಿ ಹೊಂದಿದ್ದ ಪ್ರವೀಣ್ ಆಕೆ ಒಪ್ಪದೇ ಹೋದಾಗ ಈ ಕೃತ್ಯಕ್ಕೆ ಮುಂದಾಗಿದ್ದ. ಪ್ರಕರಣ ಸಂಬಂಧ 8 ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದ ಪೊಲೀಸರು, ಘಟನೆ ನಡೆದು ಎರಡು ದಿನಗಳಲ್ಲಿ ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *