LATEST NEWS
ಕ್ಷಯರೋಗ ಎಂದು ಆಸ್ಪತ್ರೆಗೆ ಹೋದ ಮಹಿಳೆಗೆ ಇದ್ದಿದ್ದು ಏನು ಗೊತ್ತಾ..!?
ನವದೆಹಲಿ, ಮಾರ್ಚ್ 23: ಕ್ಷಯ (ಟಿಬಿ) ಇದೊಂದು ಸಾಂಕ್ರಾಮಿಕ ಸೋಂಕು, ಅದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತದೆ. ಈ ಕಾಯಿಲೆಯಿಂದ ಜೀವ ಕಳೆದು ಕೊಳ್ಳುವ ಸ್ಥಿತಿಯು ಬರಬಹುದು.
ಈ ಕಾಯಿಲೆಯ ಗಂಭೀರತೆಯನ್ನು ತಿಳಿದಿದ್ದ ಮಹಿಳೆಯೊಬ್ಬರು ತನಗೆ ಆರು ತಿಂಗಳಿನಿಂದ ನಿರಂತರವಾಗಿ ಇದ್ದ ಕೆಮ್ಮು, ಜ್ವರ ಮತ್ತು ದಪ್ಪ ಲೋಳೆಯಂತಹ ಹಲವಾರು ರೋಗಲಕ್ಷಣಗಳನ್ನು ಅನುಭವಿಸಿದ ನಂತರ ತುಂಬಾ ಹೆದರಿದ್ದರು. ಇದು ಟಿಬಿ ಎಂದು ಆಕೆ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ.
ಶಾಲಾ ಶಿಕ್ಷಕಿಯಾಗಿರುವ, 27 ವರ್ಷದ ಮಹಿಳೆಗೆ ಪ್ರತಿಜೀವಕಗಳು ಮತ್ತು ಕ್ಷಯಕ್ಕೆ ಸಂಬಂದಿಸಿದ ಚಿಕಿತ್ಸೆಯನ್ನು ಸೂಚಿಸಲಾಯಿತು. ಆದರೆ ಕೆಮ್ಮು ಜ್ವರ ಕಡಿಮೆಯಾಗಲೇ ಇಲ್ಲ. ಕಡೆಗೆ ಆಕೆಯ ಕಫವನ್ನು ಪರೀಕ್ಷಿಸಲಾಯಿತು. ಆದರೆ ವರದಿ ಮಾತ್ರ ನೆಗೆಟಿವ್ ಬಂದಿತು.
ಇದರಿಂದ ಗೊಂದಲಕ್ಕೊಳಗಾದ ವೈದ್ಯರು ಎಕ್ಸರೆ ತೆಗೆದು ನೋಡಿದ ವೈದ್ಯರೆ ಶಾಖ್ ಆದರು. ಆಕೆಯ ಬಲ ಶ್ವಾಸಕೋಶದಲ್ಲಿ ತಲೆಕೆಳಗಾದ ಚೀಲದಂತಹ ಸಣ್ಣ ವಸ್ತು ಇದ್ದಿತು. ವೈದ್ಯರು ಆಪರೇಷನ್ ಮಾಡಿ ಅದನ್ನು ತೆಗೆದು ನೋಡಿದಾಗ ಗೋತ್ತಾಗಿದ್ದು ಅದು ಕಾಂಡೋಮ್ ಎಂದು.
ನಂತರ ವೈದ್ಯರು ಆಕೆಯನ್ನು ಪ್ರಶ್ನಿಸಿದಾಗ ಮಹಿಳೆ ಮತ್ತು ಪತಿ ಸಂಬೋಗದ ಸಮಯದಲ್ಲಿ ಆದ ಎಡವಟ್ಟಿನಿಂದ ಎಂಬ ವಿಷಯ ತಿಳಿದು ಬಂದಿದೆ. ಮಹಿಳೆ ಅದನ್ನು ತಿಳಿಯದೇ ನುಂಗಿರಬಹುದು ಅಥವಾ ಸಂಕೋಚ ದಿಂದ ಈ ವಿಷಯವನ್ನು ವೈದ್ಯರಿಗೆ ಹೇಳಲಿಲ್ಲ ಎಂಬುದು ವೈದ್ಯರು ಅರಿತುಕೊಂಡರು.ಏನೇ ಇರಲಿ, ವೈದ್ಯಕೀಯ ಸಾಹಿತ್ಯದಲ್ಲಿ ಈ ಪ್ರಕರಣವು ಒಂದು ವಿಶೇಷ ಪ್ರಕರಣ ಎಂದು ವೈದ್ಯರು ದಾಖಲಾಗಿದೆ.