Connect with us

LATEST NEWS

ಕೋರ್ಟ್ ಮೂಲಕ ಜಾಮೀನು ಪಡೆದರು ಯವಕನೊಬ್ಬನ ಮತ್ತೆ ವಶಕ್ಕೆ ಪಡೆದ ಪೊಲೀಸರು …ಠಾಣೆ ಮುಂದೆ ಸೇರಿದ ಸಾರ್ವಜನಿಕರು

ಕುಂದಾಪುರ ಮಾರ್ಚ್ 23: ಗಲಾಟೆ ಸಂಬಂಧಿತ ವಿಚಾರದಲ್ಲಿ ಕೋರ್ಟ್ ನಿಂದ ಜಾಮೀನು ಪಡೆದಿದ್ದರೂ‌, ಯುವಕನೋರ್ವನನ್ನು ಮತ್ತೊಮ್ಮೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಂಡ್ಲೂರಿನಲ್ಲಿರುವ ಗ್ರಾಮಾಂತರ ಠಾಣೆಯೆದುರು ನೂರಾರು‌ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ ಘಟನೆ ಮಂಗಳವಾರ ನಡೆದಿದೆ.


ಕಳೆದ ಬುಧವಾರ ನಡೆದ ಗಲಾಟೆ ವಿಚಾರದಲ್ಲಿ‌ ನಾಗರಾಜ್ ಎನ್ನುವ ಯುವಕನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆತ ತನ್ನ ವಕೀಲರ ಮೂಲಕ‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದ. ಆದರೆ ಏಕಾಏಕಿ‌ ಮಂಗಳವಾರ‌ ಮುಂಜಾನೆ ಆತನ ಮನೆಗೆ ಬಂದ ಪೊಲೀಸರು‌ ಆತನನ್ನು‌ ಠಾಣೆಗೆ ಕರೆದೊಯ್ದಿದ್ದಾರೆ.


ವಿಚಾರ ತಿಳಿಯುತ್ತಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂರಾರು‌ ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿದರು. ಠಾಣೆ ಬಳಿ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಘಟನೆ ಬಗ್ಗೆ ಈಗಾಗಲೇ ಎಸ್ಪಿಯವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡುವುದು ಸರಿಯಲ್ಲ. ನಾನು‌ ಕೂಡ ನಾಲ್ಕು ಬಾರಿ ಶಾಸಕ‌ನಾಗಿದ್ದು ಪೊಲೀಸರಿಗೆ ಯಾವ ವಿಚಾರದಲ್ಲಿಯೂ ಒತ್ತಡ ಹಾಕಿಲ್ಲ. ಆದರೆ ಇದೀಗ ಪ್ರತಿ ಪ್ರಕರಣಗಳಲ್ಲೂ ರಾಜಕೀಯ ಹಸ್ತಕ್ಷೇಪವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು ಇದನ್ನು ಸಹಿಸಲ್ಲ. ಮುಂದೆ ಇಂತಹ ಘಟನೆ ಪುನರಾವರ್ತನೆಯಾದರೆ ಸಂಬಂದಪಟ್ಟ ಠಾಣೆಯೆದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆರೋಪಿಯನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಆತ ಬಾರದ ಕಾರಣ ಮನೆಗೆ ತೆರಳಿ ಕರೆತರಬೇಕಾಯ್ತು ಎಂದು ಪೊಲಿಸರು ಸಮಜಾಯಿಷಿ ನೀಡಿದ್ದಾರೆ.