DAKSHINA KANNADA
“ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ರನ್ನು ಕ್ರೈಸ್ತರು ಹೇಗೆ ನಡೆಸಿಕೊಳ್ಳುತ್ತಾರೆ ಗೊತ್ತಾ ?” ದಲಿತ ಮುಖಂಡ ರವೀಶ್ ಪರವ ಪ್ರಶ್ನೆ..!
ಸನಾತನ ಧರ್ಮದಲ್ಲಿ ಸಮಾನತೆ,ಸಾಮರಸ್ಯ ಇಲ್ಲ ಎಂದು ಬೇರೆ ಧರ್ಮಕ್ಕೆ ಜನರು ಮತಾಂತರಗೊಂಡಿದ್ದಾರೆ ಆದ್ರೆ ಮತಾಂತರಗೊಂಡ ದಲಿತ ರನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಗೊತ್ತಾ ? ಎಂದು ಪ್ರಶ್ನಿಸಿದ್ದಾರೆ.
ಪುತ್ತೂರು : ದೇಶದಲ್ಲಿ ಸನಾತನ ಧರ್ಮದ ಕುರಿತು ನಡೆಯುತ್ತಿರುವ ಚರ್ಚೆ ಮತ್ತು ಸನಾತನ ಧರ್ಮದ ಸಮಾನತೆಯ ಬಗ್ಗೆ ಪ್ರಶ್ನಿಸುವವರಿಗೆ ದಲಿತ ಮುಖಂಡ ದೈವ ನರ್ತಕ, ಉಪನ್ಯಾಸಕ ರವೀಶ್ ಪರವ ಉತ್ತರ ನೀಡಿದ್ದಾನೆ.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಕೃಷ್ಣ ಜನ್ಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ,
ಸನಾತನ ಧರ್ಮದಲ್ಲಿ ಸಮಾನತೆ,ಸಾಮರಸ್ಯ ಇಲ್ಲ ಎಂದು ಬೇರೆ ಧರ್ಮಕ್ಕೆ ಜನರು ಮತಾಂತರಗೊಂಡಿದ್ದಾರೆ ಆದ್ರೆ ಮತಾಂತರಗೊಂಡ ದಲಿತರನ್ನು ಕ್ರಿಶ್ಚಿಯನ್ ಧರ್ಮದಲ್ಲಿ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಗೊತ್ತಾ ? ಎಂದು ಪ್ರಶ್ನಿಸಿದ್ದಾರೆ.
ಮತಾಂತರಗೊಂಡ ದಲಿತರಿಗೆ ಪ್ರತ್ಯೇಕ ಚರ್ಚ್ ಇದೆ. ಸಮಾನತೆಯ ಬಗ್ಗೆ ಮಾತನಾಡುವವರು ಮತಾಂತರಗೊಂಡ ದಲಿತರನ್ನು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದ ಅವರು ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಹೋದವರು ಇದೀಗ ಎಸ್.ಸಿ,ಎಸ್ಟಿ ಮೀಸಲಾತಿ ಕೇಳುತ್ತಿದ್ದಾರೆ.
ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ದಾವೆಯನ್ನೂ ಹೂಡಿದ್ದು ಹಿಂದೂ ಧರ್ಮ ಸರಿಯಿಲ್ಲ ಎಂದು ಹೋದವರಿಗೆ ಮೀಸಲಾತಿ ನೀಡಬಾರದು ಎಂದು ಅಭಿಪ್ರಾಯಪಟ್ಟ ಅವರು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶವನ್ನು ದಲಿತ ಸಮುದಾಯ ನೀಡುವುದಿಲ್ಲ.
ಇದಕ್ಕೆ ದೊಡ್ಡ ಮಟ್ಟದ ಹೋರಾಟವನ್ನೂ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.