LATEST NEWS
ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜು
ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜು
ಮಂಗಳೂರು ಫೆಬ್ರವರಿ 4: ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಸಜ್ಜಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ಮತ್ತೆ ಸೇರ್ಪಡೆಗೆ ಅವಕಾಶವಿದ್ದು, ಚುನಾವಣೆಯ ಒಂದು ವಾರದ ಮೊದಲು ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬಹುದು ಎಂದು ತಿಳಿಸಿದರು.ಆದರೆ ಮತದಾರ ಪಟ್ಟಿಯಲ್ಲಿನ ಹೆಸರು ತೆಗೆಯಲು ಚುನಾವಣೆ ಘೋಷಣೆವರೆಗೆ ಮಾತ್ರ ಅವಕಾಶ ಎಂದು ತಿಳಿಸಿದರು.
24 ಮತಗಟ್ಟೆ ಸೇರಿಸಿ 1790 ಮತಗಟ್ಟೆ ಜಿಲ್ಲೆಯಲ್ಲಿದ್ದು ಅದಲ್ಲಿ 7 ಮತಗಟ್ಟೆಗಳ ಬದಲಾವಣೆಗೆ ಜಿಲ್ಲಾಡಳಿತದಿಂದ ನಿರ್ಧರಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈವರೆಗೆ 22,153 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದರೆ. ಕರಡು ಮತದಾರರ ಪಟ್ಟಿಯಲ್ಲಿ ಸದ್ಯ 8,20,764 ಪುರುಷ ಹಾಗೂ 8,46,050 ಮಹಿಳೆಯರು ಸೇರಿದಂತೆ ಒಟ್ಟು 16,66,814 ಮತದಾರರಿದ್ದಾರೆ ಎಂದು ಹೇಳಿದರು.
ಈ ಪೈಕಿ ಈಗಾಗಲೇ 16,24,137 ಜನರಿಗೆ ಭಾವಚಿತ್ರ ಇರುವ ಗುರುತಿ ಚೀಟಿಯನ್ನು ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ಜಿಲ್ಲಾಡಳಿತದಿಂದ ವೆಬ್ ಸೈಟ್ ಒಂದು ಪ್ರಾರಂಭಿಸಲಾಗಿದ್ದು , ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು www.deodk.com ಹೆಸರಿನ ವೆಬ್‌ಸೈಟ್ ನಿಂದ ಪಡೆದುಕೊಳ್ಳಬಹುದಾಗಿದೆ.