Connect with us

    LATEST NEWS

    7119 ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಕಳುಹಿಸಿದ ದ.ಕ ಜಿಲ್ಲಾಡಳಿತ

    7119 ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಕಳುಹಿಸಿದ ದ.ಕ ಜಿಲ್ಲಾಡಳಿತ

    ಮಂಗಳೂರು ಮೇ 3: ಲಾಕ್ ಡೌನ್ ನಿಂದಾಗಿ ದ.ಕ ಜಿಲ್ಲೆಯಲ್ಲಿ ಸಿಲುಕಿ ಹಾಕಿಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರ 7119 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಸುರಕ್ಷಿತಾಗಿ ಸ್ವಂತ ಊರುಗಳಿಗೆ ಕಳುಹಿಸಿಕೊಟ್ಟಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ವಸತಿ ರಹಿತರಾಗಿದ್ದ ಕಾರ್ಮಿಕರನ್ನು ಜಿಲ್ಲಾಡಳಿತದ ವಿವಿಧ ನಿರಾಶ್ರಿತರ ಕೇಂದ್ರಗಳಲ್ಲಿಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಏಪ್ರಿಲ್ 24ರಿಂದ ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ.

    ಕೋವಿಡ್ -19 ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿದ ಕಾರಣ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಸತಿ ರಹಿತರಾಗಿದ್ದ ಕಾರ್ಮಿಕರನ್ನು ಹಾಗೂ ನಿರಾಶ್ರಿತರನ್ನು ದ.ಕ.ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿದ್ದ ವಸತಿ ನಿಲಯಗಳಲ್ಲಿ ಮಾರ್ಚ್ 27ರಿಂದ ಆಶ್ರಯ ನೀಡಲಾಗಿತ್ತು.

    ಪುರಭವನ, ವಿವಿಧ ಸಭಾಂಗಣ, ಸರಕಾರಿ ವಿದ್ಯಾರ್ಥಿ ನಿಲಯ, ಹಾಸ್ಟೆಲ್ಗಳಲ್ಲಿ ಆಶ್ರಯ ನೀಡಲಾಗಿತ್ತು. ಇವರಿಗೆ ದಿನದ ಎಲ್ಲಾ ಹೊತ್ತು ಊಟೋಪಚಾರದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿತ್ತು. ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು.
    ಈ ಎಲ್ಲಾ ಕಾರ್ಮಿಕರ ಪೈಕಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಏಪ್ರಿಲ್ 24 ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ.

    ಮಂಗಳೂರು ನಗರದಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಾಗಿರುವ ಕೂಳೂರು, ಸುರತ್ಕಲ್, ಪಣಂಬೂರು, ಬೈಕಂಪಾಡಿ, ಯೆಯ್ಯಾಡಿ, ಮುಲ್ಕಿ, ಉಳ್ಳಾಲ, ಬಂದರು, ಹೊಯಿಗೆ ಬಜಾರ್ ಮುಂತಾದ ಪ್ರದೇಶಗಳು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದ ತಮ್ಮ ತಮ್ಮ ಜಿಲ್ಲೆಗಳಿಗೆ ಕಟ್ಟಡ ಮತ್ತು ಕೃಷಿ ಕೆಲಸಗಳಿಗೆ ತೆರಳಲು ಇಚ್ಚಿಸಿದ 7119 ಕಾರ್ಮಿಕರನ್ನು ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ಬಸ್ ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ. ಒಟ್ಟು 266 ಬಸ್ ಗಳನ್ನು ಇದಕ್ಕಾಗಿ ಬಳಸಲಾಗಿತ್ತು. ಹೆಚ್ಚಿನ ಕಾರ್ಮಿಕರು ಬಾಗಲಕೋಟೆ, ಕೊಪ್ಪಳ, ಬಿಜಾಪುರ, ಯಾದಗಿರಿ, ಗದಗ, ರಾಯಚೂರು ಹಾಗೂ ಗುಲ್ಪರ್ಗ ಜಿಲ್ಲೆಯವರಾಗಿರುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply