LATEST NEWS
ಟ್ರೋಲ್ ಪೇಜ್ ನಲ್ಲಿ ದೈವಾರಾಧನೆಗೆ ನಿಂದನೆ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ದೂರು
ಟ್ರೋಲ್ ಪೇಜ್ ನಲ್ಲಿ ದೈವಾರಾಧನೆಗೆ ನಿಂದನೆ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರು ಅ.22: ತುಳುನಾಡಿನ ದೈವಾರಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿದ್ದಾರೆ.ಟ್ರೋಲ್ ಹೂ ಟ್ರೋಲ್ಸ್ ಕನ್ನಡಿಗ ಎಂಬ ಫೇಸ್ ಬುಕ್ ಪುಟದಲ್ಲಿ ದೈವಾರಾಧನೆ ವಿರುದ್ದ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ.
ಈ ಹಿಂದೆಯೂ ಇದೇ ಪುಟದಲ್ಲಿ ದೈವಗಳ ಚಿತ್ರಗಳನ್ನು ವಿಕೃತವಾಗಿ ಎಡಿಟ್ ಮಾಡಿ ಪೋಸ್ ಮಾಡಿದ್ದು ಈಗ ಮತ್ತೆ ಮುಂದುವರಿದು ನಮ್ಮ ಧಾರ್ಮಿಕ ನಂಬಿಕೆ ಅಪಹಾಸ್ಯ ಮಾಡುವ ಕೆಲಸ ಮಾಡುತ್ತಿದ್ದಾನೆ. ಇದರಿಂದ ಅಪಾರ ಸಂಖ್ಯೆಯ ದೈವ ಭಕ್ತರ ಭಾವನೆಗೆ ನೋವಾಗಿದೆ.
ಇದನ್ನು ಪ್ರಶ್ನಿಸಿದವರ ಪೋಟೋಗಳನ್ನು ಎಡಿಟ್ ಮಾಡಿ ವೈಯುಕ್ತಿಕ ತೇಜೋವಧೆ ಮಾಡುತ್ತಿದ್ದಾನೆಯ ಈ ಪುಟವನ್ನು ರದ್ದುಗೊಳಿಸಿ ಇದರ ಹಿಂದಿನ ವ್ಯಕ್ತಿಯ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ತುಳುನಾಡ್ ಸಂಘಟನೆ ಅಧ್ಯಕ್ಷರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಡಾ. ಹರ್ಷ ಅವರು ಡಿಸಿಪಿ ಲಕ್ಷ್ಮೀ ಗಣೇಶ್ ಅವರಿಗೆ ಸೂಚನೆ ನೀಡಿದ್ದಾರೆ.