Connect with us

    DAKSHINA KANNADA

    ಪರಿಹಾರ ವಿತರಣೆಯಲ್ಲೂ ಬಿಜೆಪಿ ಸರಕಾರದ ತಾರತಮ್ಯ: ಮುಸ್ಲಿಂ ಯುವಕರ ಹತ್ಯೆಯ ತನಿಖೆಗೆ ಮುಸ್ಲಿಂ ಯುವಜನ ಪರಿಷತ್ ಆಗ್ರಹ

    ಪುತ್ತೂರು, ಮೇ 30: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಅಲ್ಪಸಂಖ್ಯಾತ ಯುವಕರ ಹತ್ಯೆಗೆ ಉನ್ನತ ಮಟ್ಟದ ತನಿಖೆಗೆ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹ ಮಾಡಿದ್ದಾರೆ.

    ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಪ್ರಕರಣದ ತನಿಖೆ ಮಾಡುವಂತೆ ಒತ್ತಾಯಿಸಿದ್ದರು, ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆಯಾದ‌ ಬಳಿಕ ಫಾಸಿಲ್, ಜಲೀಲ್ ಮತ್ತು ಮಸೂದ್ ಕೊಲೆಯಾಗಿದೆ. ಆದರೆ ಆಗಿನ ಬಿಜೆಪಿ ಸರಕಾರ ಈ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆಸಿದೆ.

    ಸರಕಾರ ಈ ಮೂರೂ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ನೀಡಬೇಕು. ಪ್ರತೀ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಬೇಕು. ಮೂರೂ ಕೊಲೆ ಪ್ರಕರಣವನ್ನು NIA ಅಥವಾ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು.

    ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲೂ ಹಲವು ಅನುಮಾನಗಳಿವೆ, ಈ ಪ್ರಕರಣವನ್ನೂ ಮರು ತನಿಖೆ ನಡೆಸಬೇಕು. ಪ್ರವೀಣ್ ನೆಟ್ಟಾರು ಕೊಲೆಗೆ ಮೂವರ ಕೊಲೆ ಮಾಡಿರುವುದಾಗಿ ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್ ಸಾರ್ವಜನಿಕವಾಗಿ ಹೇಳಿದ್ದರು. ಅವರ ಮೇಲೆ ಈವರೆಗೂ ಪೋಲೀಸರು ಸುಮೊಟ್ಟೋ ಕೇಸು ದಾಖಲಿಸಿಲ್ಲ, ಸರಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಯುವಜನ ಪರಿಷತ್ ಆಗ್ರಹ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply