Connect with us

    DAKSHINA KANNADA

    ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸಹಕಾರಿ ರಂಗದ ಎಲ್ಲಾ ನಿರ್ದೇಶಕತ್ವ ರದ್ದು

    ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸಹಕಾರಿ ರಂಗದ ಎಲ್ಲಾ ನಿರ್ದೇಶಕತ್ವ ರದ್ದು

    ಮಂಗಳೂರು, ಡಿಸೆಂಬರ್ 16 : ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸಹಕಾರಿ ರಂಗದ ಎಲ್ಲಾ ನಿರ್ದೇಶಕತ್ವ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.

    ಸಹಕಾರ ಸಂಘಗಳ ಮೈಸೂರು ಪ್ರಾಂತದ ಜಂಟಿ ನಿಬಂಧಕರಿಂದ ಈ ಮಹತ್ವದ ಆದೇಶ ಹೊರ ಬಿದ್ದಿದೆ.

    ಕಿಶನ್ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಸಹಾಕಾರಿ ರಂಗದ ಎಲ್ಲಾ ನಿರ್ದೇಶ ಸ್ಥಾನಗಳಿಗೂ ಈ ಆದೇಶ ಅನ್ವಯ ವಾಗುತ್ತದೆ ಎಂದು ಅವರು ತಮ್ಮ ಅದೇಶದಲ್ಲಿ ಉಲ್ಲೇಖಿಸಿದ್ದಾರೆ.

    ಸಹಕಾರ ಸಂಘಗಳ ಕಾಯ್ದೆ 1959 ಕಲಂ 29 ಸಿ (೧)ಬಿ ಉಲ್ಲಂಘನೆ ಪ್ರಕರಣ ಕಿಶನ್ ಮೇಲಿದೆ.

    ಸುಂದರಗೌಡ ಈಚಿಲ ಮತ್ತು ಸುದರ್ಶನ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸಹಕಾರ ಸಂಘಗಳ ಮೈಸೂರು ಪ್ರಾಂತದ ಜಂಟಿ ನಿಬಂಧಕರು ಕಿಸನ್ ಹೆಗ್ಡೆ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದಿಂದ ಐದು ವರ್ಷಗಳ ವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಸದರಿ ಈ ಅನರ್ಹದ ಅವಧಿಯಲ್ಲಿ ಯಾವುದೇ ಆಡಳಿತ ಸಹಾಕಾರ ಮಂಡಳಿಯ ನಿರ್ದೇಶಕರಾಗ ನೇಮಕವಾಗಲು ಕಿಶನ್ ಹೆಗ್ಡೆ ಅನರ್ಹವೆಂದು ಆದೇಶದಲ್ಲಿ ಹೇಳಿದ್ದಾರೆ.

    ಕಿಶನ್ ಹೆಗ್ಡೆ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ಅವರ ಬಲಗೈಯಾಗಿದ್ದರು.

    ಅವರು ಶಿರಿಯಾರ ವ್ಯ ವಸಾಯ ಸೇವಾ ಸಹಕಾರಿ ಸಂಘ, ಉಡುಪಿ ತಾಲೂಕು ಭೂಅಭಿವೃದ್ದಿ ಬ್ಯಾಂಕ್, ಉಡುಪಿ ಜಿಲ್ಲಾ ಸಹಾಕಾರಿ ಯೂನಿಯನ್, ಎಸ್ ಸಿ ಡಿ ಸಿ‌ಸಿ ಬ್ಯಾಂಕ್ ಮಂಗಳೂರು ಇವುಗಳಲ್ಲಿ ನಿರ್ದೇಶಕರಾಗಿದ್ದರು.

    ಈ ಎಲ್ಲಾ ಸಹಕಾರಿ ರಂಗದ ನಿರ್ದೇಶಕ ಸ್ಥಾನಗಳಿಂದಲೂ ಕಿಶನ್ ಹೆಗ್ಡೆ ಅವರು ಅನರ್ಹಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply