Connect with us

LATEST NEWS

ಕಾರಂತರು ಸ್ವಲ್ಪ ಬೇಗ ಸತ್ತರೆ ಒಳ್ಳೆಯದಿತ್ತು ಎಂದು ಅನ್ನಿಸಿತ್ತು – ಪತ್ರಕರ್ತ ದಿನೇಶ್ ಅಮೀನ್ ಮಟ್ಟು

ಕಾರಂತರು ಸ್ವಲ್ಪ ಬೇಗ ಸತ್ತರೆ ಒಳ್ಳೆಯದಿತ್ತು ಎಂದು ಅನ್ನಿಸಿತ್ತು – ಪತ್ರಕರ್ತ ದಿನೇಶ್ ಅಮೀನ್ ಮಟ್ಟು

ಮಂಗಳೂರು ಆಗಸ್ಟ್ 12: ನಾಡಿನ ಶ್ರೇಷ್ಠ ಕವಿ ಶಿವರಾಮ ಕಾರಂತರು ಸ್ವಲ್ಪ ಬೇಗ ನಿಧನರಾಗಿದ್ದರೆ ಒಳ್ಳೆಯದಿತ್ತು ಎಂದು ಹೇಳುವ ಮೂಲಕ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮತ್ತೆ ವಿವಾದಕ್ಕೆ ಗ್ರಾಸವಾಗಿದ್ದಾರೆ.

ಮಂಗಳೂರಿನಲ್ಲಿ ‘ಕೋಶ ಓದು ದೇಶ ನೋಡು ಬಳಗ’ದ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಮಾತನಾಡಿದ ಅವರು ಕಾರಂತರು ಕೊನೆಯ ದಿನಗಳಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹರಿದ ವಿಚಾರದಲ್ಲಿ ಆರ್‌ಎಸ್‌ಎಸ್ ಪರವಾಗಿ ಮಾತನಾಡಿದ್ದರು. ಆ ಸಂದರ್ಭ ಕಾರಂತರು ಸ್ವಲ್ಪ ಬೇಗ ಸತ್ತರೆ ಒಳ್ಳೆಯದಿತ್ತು ಎಂದು ಅನ್ನಿಸಿತ್ತು.

ಕಾರಂತರ ‘ಚೋಮನ ದುಡಿ’ ಕಾದಂಬರಿ ಬಗ್ಗೆ ಟೀಕೆಗಳು ಬಂದಿದ್ದವು. ಸಂಶೋಧನ ಗ್ರಂಥ ರೀತಿ ಬರೆದಿದ್ದಾರೆ. ಚೋಮನ ಅನುಭವ ಕಾರಂತರ ಸಾಹಿತ್ಯದಲ್ಲಿ ಬರಲು ಹೇಗೆ ಸಾಧ್ಯ ? ಚೋಮನ ಕಷ್ಟ ಕಾರಂತರಿಗೇನು ಗೊತ್ತು ಮುಂತಾದ ಟೀಕೆಗಳು ಬಂದಿದ್ದವು ಎಂದು ಈ ಸಂದರ್ಭದಲ್ಲಿ ಹೇಳಿದರು.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *