KARNATAKA
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೆ ಕೋಟ ತಿರುಗೇಟು

ಉಡುಪಿ: ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೆ ಕೋಟ ತಿರುಗೇಟು ನೀಡಿದ್ದಾರೆ. 2024 ಕ್ಕೆ ದೇಶದಲ್ಲಿ ಕೊನೆಯ ಚುನಾವಣೆ ಎಂದಿರುವ ಸಿಂಗ್.
ದೇಶದ ಜನ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದಾರೆ ಮತದಾನ ಮಾಡಿ ಬಿಜೆಪಿಯ ಕೈಗೆ ಅಧಿಕಾರವನ್ನು ಕೊಟ್ಟಿದ್ದಾರೆ.
ಜನಾದೇಶದ ಮೂಲಕ ಮೋದಿ ಅಧಿಕಾರ ಸೂತ್ರವನ್ನು ಹಿಡಿದಿದ್ದಾರೆ.ಜಗತ್ತಿನ ಅದ್ಭುತಗಳಲ್ಲಿ ಇದು ಕೂಡ ಒಂದು.
ದಿಗ್ವಿಜಯಸಿಂಗ್ ಗೆ ರಾಷ್ಟ್ರಹಿತದ ಕಲ್ಪನೆ ಇರಲಿಲ್ಲ, ಅವರಿಗೆ ರಾಜಕಾರಣವೇ ಮುಖ್ಯ ಆಗಿತ್ತು. ದಿಗ್ವಿಜಯ ಸಿಂಗ್ ಗೆ ಈಗ ಜ್ಞಾನೋದಯ ಆಗಿದೆ ಕಾಂಗ್ರೆಸ್ ಗೆ ಈ ಜೀವನದಲ್ಲಿ ಅಧಿಕಾರ ಸಿಗುವುದಿಲ್ಲ. ರಾಷ್ಟ್ರದ ಜನ ಈಗ ಜಾಗೃತರಾಗಿದ್ದಾರೆ,
ಈ ಸತ್ಯವನ್ನು ದಿಗ್ವಿಜಯ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ .
