Connect with us

KARNATAKA

ಹುಬ್ಬಳ್ಳಿ :  ನೈಋತ್ಯ ರೈಲ್ವೆ  ಡೀಸೆಲ್ ನಿರ್ವಹಣಾ ಗ್ರೂಪ್ ಸಭೆ, ಡೀಸೆಲ್ ಲೋಕೋಮೋಟಿವ್ ಗಳ ಕಾರ್ಯನಿರ್ವಹಣೆ, ದಕ್ಷತೆ,ಸುಧಾರಿಸುವ ಮಾರ್ಗಗಳ ಕರಿತು ಚರ್ಚೆ

ಹುಬ್ಬಳ್ಳಿ :  ನೈಋತ್ಯ ರೈಲ್ವೆಯು 4 ನೇ ಡೀಸೆಲ್ ನಿರ್ವಹಣಾ ಗುಂಪು (ಡಿಎಂಜಿ) ಸಭೆಯನ್ನು 2024 ರ ಅಕ್ಟೋಬರ್ 24 ಮತ್ತು 25 ರಂದು ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್ ನಲ್ಲಿ ಆಯೋಜಿಸಿತ್ತು. ಡೀಸೆಲ್ ಲೋಕೋಮೋಟಿವ್ ಗಳ ಕಾರ್ಯನಿರ್ವಹಣೆ, ದಕ್ಷತೆ,ಸುಧಾರಿಸುವ ಮಾರ್ಗಗಳ ಕರಿತು ಚರ್ಚೆ, ಮತ್ತು ಅನುಸರಿಬೇಕಾದ ಹೊಸ ವಿಧಾನಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಿತು.

 

ಡಿಎಂಜಿ ಎಲ್ಲಾ ವಲಯದ ರೈಲ್ವೆ, ರೈಲ್ವೆ ಮಂಡಳಿ, ಆರ್ಡಿಎಸ್ಒ ಮತ್ತು ಉತ್ಪಾದನಾ ಘಟಕಗಳ ಕೇಡರ್ನನ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಗುಂಪಾಗಿದೆ. ನಿರ್ವಹಣಾ ಕಾರ್ಯತಂತ್ರಗಳನ್ನು ಚರ್ಚಿಸಲು, ನವೀನ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಡೀಸೆಲ್ ಲೋಕೋಮೋಟಿವ್ ಗಳ ನಿರ್ವಹಣೆಯಲ್ಲಿ ಸಾಮಾನ್ಯ ಸವಾಲುಗಳನ್ನು ಪರಿಹರಿಸಲು ಈ ಸಭೆಯನ್ನು ನಿಯತಕಾಲಿಕ ಮಧ್ಯಂತರಗಳಲ್ಲಿ ನಡೆಸಲಾಗುತ್ತದೆ.

ರೈಲ್ವೆ ಮಂಡಳಿಯ ರೋಲಿಂಗ್ ಸ್ಟಾಕ್ ನ ಹೆಚ್ಚುವರಿ ಸದಸ್ಯ  ವಿಜಯ್ ಪ್ರತಾಪ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಎಂಜಿನಿಯರ್  ಇಶಾಕ್ ಖಾನ್, ನೈಋತ್ಯ ರೈಲ್ವೆಯ ಹೆಚ್ಚುವರಿ ಜನರಲ್ ಮ್ಯಾನೇಜರ್  ಕೆ.ಎಸ್.ಜೈನ್, ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ  ಹರ್ಷ್ ಖರೆ ಮತ್ತು ರೈಲ್ವೆಯ ವಲಯ ರೈಲ್ವೆ ನಿರ್ದೇಶನಾಲಯ, ರೈಲ್ವೆ ಮಂಡಳಿ, ಆರ್ ಡಿಎಸ್ ಒ ಮತ್ತು ಬನಾರಸ್ ಲೋಕೋಮೋಟಿವ್ ವರ್ಕ್ಸ್ ಮತ್ತು ಪಟಿಯಾಲ ಲೋಕೋಮೋಟಿವ್ ವರ್ಕ್ಸ್ ನಂತಹ ಉತ್ಪಾದನಾ ಘಟಕಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ 4 ನೇ ಡಿಎಂಜಿ ಸಭೆಯ ಕಾರ್ಯಸೂಚಿಯಲ್ಲಿ ಡೀಸೆಲ್ ಲೋಕೋಮೋಟಿವ್ ನಲ್ಲಿ ಅಳವಡಿಸಲಾದ ವಿವಿಧ ಪ್ರಮುಖ ಮತ್ತು ನಿರ್ಣಾಯಕ ಅಸೆಂಬ್ಲಿಗಳ ಕಾರ್ಯಕ್ಷಮತೆಯನ್ನು ಒಳಗೊಂಡಿತ್ತು ಮತ್ತು ಅಂತಹ ವೈಫಲ್ಯಗಳನ್ನು ಕಡಿಮೆ ಮಾಡಲು ಮತ್ತು ಡೀಸೆಲ್ ಲೋಕೋಮೋಟಿವ್ ಗಳ ವಿಶ್ವಾಸಾರ್ಹತೆ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸಲು ಕ್ರಿಯಾ ಯೋಜನೆಗಳು ಒಳಗೊಂಡಿದ್ದವು.

ಈ ಸಭೆಯಲ್ಲಿ, ಮೆಸರ್ಸ್ ವಾಬ್ಕೊ, ಮೆಸರ್ಸ್ ಸೀಮೆನ್ಸ್, ಮೆಸರ್ಸ್ ಪ್ರೊಗ್ರೆಸ್ ರೈಲ್, ಮೆಸರ್ಸ್ ಮೇಧಾ ಸರ್ವೋ ಡ್ರೈವ್ಸ್ ಲಿಮಿಟೆಡ್, ಹೈದರಾಬಾದ್, ಮೆಸರ್ಸ್ ನಾರ್ ಬ್ರೆಮ್ಸೆ, ಹರಿಯಾಣ ಮುಂತಾದ ವಿವಿಧ ಸಂಸ್ಥೆಗಳಿಂದ ತಾಂತ್ರಿಕ ವಿಚಾರ ಸಂಕಿರಣ ಮತ್ತು ಪ್ರಸ್ತುತಿಯನ್ನು ನೀಡಲಾಯಿತು.

24.10.2024 ರಂದು, ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯ / ರೋಲಿಂಗ್ ಸ್ಟಾಕ್ನ ನ  ವಿಜಯ್ ಪ್ರತಾಪ್ ಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿ ಅನುಕರಣೀಯ ಕೆಲಸ ಮಾಡಿದ ವಿವಿಧ ವಲಯಗಳ 40 ತಾಂತ್ರಿಕ ಸಿಬ್ಬಂದಿ ಮತ್ತು ಲೋಕೋ ಸಿಬ್ಬಂದಿಗೆ ಪ್ರಮಾಣಪತ್ರಗಳನ್ನು ನೀಡಿದರು.

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್  ಅರವಿಂದ್ ಶ್ರೀವಾಸ್ತವ ಅವರು ಭಾರತೀಯ ರೈಲ್ವೆಯ ತಡೆರಹಿತ ಕಾರ್ಯನಿರ್ವಹಣೆಯಲ್ಲಿ ಡೀಸೆಲ್ ಶೆಡ್ ಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಇದಲ್ಲದೆ, ಡೀಸೆಲ್ ಲೋಕೋಮೋಟಿವ್ ಗಳ ಕಾರ್ಯನಿರ್ವಹಣೆಯ ದಕ್ಷತೆಯನ್ನು ಮತ್ತಷ್ಟು ಸುಧಾರಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಕಂಡುಹಿಡಿಯುವಂತೆ ಅವರು ಎಲ್ಲಾ ಅಧಿಕಾರಿಗಳಿಗೆ ಒತ್ತಿ ಹೇಳಿದರು. ಸಭೆಯಲ್ಲಿ ಭಾಗವಹಿಸಿದ ಎಲ್ಲ ಪ್ರತಿನಿಧಿಗಳಿಗೆ ಅವರು ಧನ್ಯವಾದ ಅರ್ಪಿಸಿದರು.

ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಎಂಜಿನಿಯರ್  ಇಶಾಕ್ ಖಾನ್ ಅವರು ಧನ್ಯವಾದಗಳನ್ನು ಅರ್ಪಿಸಿದರು, ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಭಾರತದ ರೈಲ್ವೆಯ ಜೀವನಾಡಿಯನ್ನು ಕಾಪಾಡಿಕೊಳ್ಳುವಲ್ಲಿ ಅವರು ಪ್ರಯತ್ನಗಳನ್ನು ಗುರುತಿಸಿದರು. ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳ ಮೇಲೆ ಕೇಂದ್ರೀಕರಿಸಿ, ಡೀಸೆಲ್ ನಿರ್ವಹಣಾ ಗುಂಪಿನ ಸಭೆ ದೇಶಾದ್ಯಂತ ಲೋಕೋಮೋಟಿವ್ ನಿರ್ವಹಣೆಯಲ್ಲಿ ನಿರಂತರ ಉತ್ಕೃಷ್ಟತೆಗೆ ವೇದಿಕೆಯನ್ನು ಕಲ್ಪಿಸಿತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *