Connect with us

    LATEST NEWS

    ದಿನಕ್ಕೊಂದು ಕಥೆ- ಪೊಟೋಗ್ರಾಪರ್

    ಪೊಟೋಗ್ರಾಪರ್

    ಅಕ್ಷತೆಗಳು ನೆಲದ ಮೇಲೆ ಬಿದ್ದಿವೆ. ಸಂಭ್ರಮದ ಮಾತುಗಳು ಸುತ್ತಲೆಲ್ಲ ತುಂಬಿದೆ. ಶುಭಾಶಯಗಳ ವಿನಿಮಯ ,ಗಟ್ಟಿಮೇಳದ ನಾದನ, ಜೀವನದ ಅದ್ಭುತ ಕ್ಷಣವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ ಎಲ್ಲಾ.ಹಲವು ವರ್ಷವಾದ ಮೇಲೆ ಮತ್ತೊಮ್ಮೆ ಈ ಸಂಭ್ರಮವನ್ನು ನೆನಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವನನ್ನು ನೇಮಿಸಿದ್ದಾರೆ. ಕಣ್ಣು ಕಿರಿದು ಮಾಡಿ ಒಕ್ಕಣ್ಣನಾಗಿ ಸಣ್ಣ ಕಿಂಡಿಯೊಳಗಿಂದ ಭಾವಚಿತ್ರ ರಸನಿಮಿಷಗಳನ್ನು ಕ್ಲಿಕ್ಕಿಸುತ್ತಾನೆ. ಬೆವರಿನ ಹನಿ ಹಣೆಯಲ್ಲಿ ಸಾಲುಗಟ್ಟಿ ಇಳಿಯುತ್ತಿದೆ.

    ಮುಂಜಾನೆಯ ಹೊತ್ತಿಗೆ ಮನೆಗೆ ಬಂದಿಳಿದು ಶಾಸ್ತ್ರಗಳೊಂದಿಗೆ ಚಿತ್ರ ಕ್ಲಿಕ್ಕಿಸಲು ಆರಂಭಿಸುತ್ತಾನೆ. ಮದುವೆ ಮನೆಯ ದ್ವಾರದಿಂದ ಹಿಡಿದು ಮಂಟಪ ,ವಧು-ವರ ,ಬಂಧು-ಬಳಗ ,ಅದ್ಭುತ ಕ್ಷಣ ,ಇನ್ನೊಂದಿಷ್ಟು ತರಲೆ ಎಲ್ಲವನ್ನು ಕ್ಯಾಮೆರದೊಳಗೆ ತುಂಬಿಸಿಕೊಳ್ಳಬೇಕು. ಹೊಟ್ಟೆಯೊಳಗೆ ಖಾಲಿ ಜಾಗವನ್ನು ತುಂಬುವ ಯಾವ ಆಹಾರವೂ ಸಿಗುವುದಿಲ್ಲ ಕುಡಿಯೋಕೆ ನೀರೂ ಸಹ. ಸಮಯವಿಲ್ಲ… ಬಂದವರು ಊಟ ಮಾಡಿ ಮನೆ ತಲುಪಿದರೂ ಅವನ ಕಾರ್ಯ ಮುಗಿಯುವುದಿಲ್ಲ.

    ಊಟದ ಸನ್ನಿವೇಶವನ್ನು ಕ್ಲಿಕ್ಕಿಸಬೇಕು. ಎಲ್ಲರೂ ಕೊನೆಗೆ ಕೈ ತೊಳೆದು ಊಟಕ್ಕೆ ಕುಳಿತಾಗ ಇವನಿಗೆ ಒಂದಷ್ಟು ಸಿಹಿಗಳು ಖಾಲಿಯಾಗಿ ಸಿಕ್ಕಿದ್ದೇ ಪರಮಾನ್ನ ಎಂದು ತಿನ್ನುವ ಸ್ಥಿತಿ. ಪಾದಗಳು ವಿಶ್ರಾಂತಿ ಬೇಡಿದರು ನೀಡುವ ಸ್ಥಿತಿ ಇಲ್ಲದ ಬಡವನಿವನು. ತಪ್ಪುಗಳಿಗೆ ಒಂದಿಷ್ಟು ಬೈಗುಳ, ಇದರ ಜೊತೆ ಮತ್ತೆ ಎಲ್ಲ ಭಾವಚಿತ್ರಗಳನ್ನು ಜೋಡಿಸಬೇಕು ಅಂದಗೊಳಿಸಿ ನೀಡಬೇಕು. ಮತ್ತೊಂದಿಷ್ಟು ಚೌಕಾಸಿ. ದುಡಿಮೆಯ ಕಾಸು ಸಿಗುವಾಗ ಮನೆಯಲ್ಲಿ ಅಕ್ಕಿ ಖಾಲಿ ಆಗಿರುತ್ತೆ.

    ಸಾವಿರಗಳು ಸಿಕ್ಕರೂ ಅದು ಸಾಲದ ಕಡೆಗೆ ಓಡುತ್ತದೆ. ಅಂದ ದೃಶ್ಯವನ್ನು ಜತನವಾಗಿ, ಮತ್ತೊಮ್ಮೆ ನೆನಪಿಗಾಗಿ ಉಳಿಸುವ ಫೋಟೋಗ್ರಾಫರ್ ಆದರೆ ಅವನ ಚಿತ್ರ ತೆಗೆಯೋಕೆ ಸಮಯವೇ ಇಲ್ಲ .ಬದುಕು ಕ್ಯಾಮೆರದೊಳಗೆ ಅಡಗಿದೆ. ಹೊರಬರುವುದಕ್ಕೆ ಇನ್ನೂ ಕಾಯುತ್ತಲಿದೆ …..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *