Connect with us

LATEST NEWS

ದಿನಕ್ಕೊಂದು ಕಥೆ- ಘಟನೆ

ಘಟನೆ

ಘಟನೆಗಳು ಯಾಕೆ ಘಟಿಸುತ್ತವೆ. ಪೂರ್ವನಿರ್ಧರಿತವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಘಟಿಸಿದ ನಂತರ ಅದರ ಪರಿಣಾಮದ ಮೇಲೆ ಅದಕ್ಕೊಂದು ಕಾರಣ ದೊರಕುತ್ತದೆ. ಅಕಾಲನಿರಭಯನ ಪುಸ್ತಕದಲ್ಲಿ ಪೂರ್ವನಿರ್ಧರಿತವಾಗಿದ್ದರೆ ನಮಗದು ಆಕಸ್ಮಿಕ, ಹೀಗೆಂದು ಮಾತಿನ ಲಹರಿಯನ್ನು ನುಡಿಸುತ್ತಲೇ ಇದ್ದರು ಹರೀಶಣ್ಣ.

ಇದು ಅವರ ಅನುಭವದ ಮಾತೋ, ವಿವೇಚನೆಯ ಮಾತೋ ಗೊತ್ತಾಗಲಿಲ್ಲ. ಮಾತಿನೊಳಗನ ಅರ್ಥ ತಿಳಿಯೋಕೆ ಒಂದಷ್ಟು ಸಮಯ ಹಿಡಿಯಿತು. “ನನ್ನ ಪಕ್ಕದ ಮನೆಯಲ್ಲಿ ಆ ದಿನ ಸೂತಕದ ಛಾಯೆ ಆವರಿಸಿತ್ತು .ಅವರು ಕಳೆದುಕೊಂಡಿರುವುದು ಆಧಾರವನ್ನು. ಅದು ಅನಿರೀಕ್ಷಿತ ಹೊಡೆತ!.

ಎಲ್ಲರೂ ಸಾಂತ್ವನ ಹೇಳೋರು. ಆಗಬಾರದಿತ್ತು ಇದು, ಮುಂದೇನು?. ಮನೆಯ ಗೋಡೆಗಳು ಭಯದಿ ಕಂಪಿಸಿದವು. ಸಹಾಯದ ಕೈಗಳು ಹೆಚ್ಚಾದವು. ಮನೆಗೆ ಹೆಗಲು ಕೊಟ್ಟವರು ಹಲವರು .ಅರ್ಧ ನಿಂತಿದ್ದ ಮನೆ ಪೂರ್ತಿಯಾಯಿತು, ಆ ಮನೆಯ ಹುಡುಗಿಗೆ ಊರವರು ಸೇರಿ ಮದುವೆ ಮಾಡಿದ್ರು, ಮಗನಿಗೊಂದು ಕೆಲಸ ಕೊಡಿಸಿದರು, ಕೃಷಿಯಲ್ಲಿ ಕೈಜೋಡಿಸಿದರು. ಮನೆಯ ಕಂಪನ ನಿಂತಿತ್ತು. ಭದ್ರವಾಗಿ ಬೆಳಗಿತು. ಆಧಾರಸ್ಥಂಭ ಕುಸಿದ ಕಾರಣ ಬೆಳಗಿತೋ ಗೊತ್ತಿಲ್ಲ.

ಆಧಾರವಿದ್ದರೆ ಇದು ಸಾಧ್ಯವಾಗುತ್ತಿತ್ತೋ ಅದೂ ಗೊತ್ತಿಲ್ಲ . ಇಲ್ಲಿ ಕಾರಣವ ಹುಡುಕುತ್ತಿಲ್ಲ ನಾನು. ಆಗುವುದು ಒಳ್ಳೆಯದಕ್ಕೆ ಅನ್ನೋದಷ್ಟೇ ನನ್ನ ಅಂಬೋಣ. ಹರೀಶಣ್ಣ ಬೆವರು ಒರೆಸಿದರು. ಅದರಲ್ಲಿ ಕಣ್ಣೀರು ಸೇರಿತ್ತು. ಕಾರಣ ನನಗೆ ತಿಳಿಯಲೇ ಇಲ್ಲ. ಆದರೆ ಘಟನೆಯೊಂದು ಘಟಿಸಿತ್ತು.

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *