Connect with us

LATEST NEWS

ದಿನಕ್ಕೊಂದು ಕಥೆ- ಕಂಬಿಯ ಹಿಂದೆ

ಕಂಬಿಯ ಹಿಂದೆ

ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ “ಕಂಬಿಯ ಹಿಂದೆ ಒಂದು ಬದುಕಿದೆ” ಆ ಬಂಧನದ ನಡುವೆ ಅರಳುವ ಹೂವಿನ ಪರಿಮಳಕ್ಕೆ ತಡೆಹಿಡಿಯಲಾಗಿದೆ ಅಂತೆ.

ನೋವಿನ ಕೂಗು ಗೋಡೆಗಳನ್ನ ದಾಟಲಾಗದ ಇದ್ದರೂ ಕಂಬಿಯ ಒಳಗಿಂದ ಹೊರ ಹೋಗಬಹುದಿತ್ತು. ಅದಕ್ಕೂ ಅವಕಾಶ ಇಲ್ಲವಾಗಿದೆ . ಅವನಿಗೆ ‘ಅಪ್ಪ ‘ನೆನಪಾಗುತ್ತಾರೆ ,ಊರ ಜಾತ್ರೆಯಲ್ಲಿ ಪಕ್ಕದ ಮನೆಯ ಹುಡುಗ ಐಸ್ಕ್ರೀಮ್ ತೆಗೆದುಕೊಂಡಾಗ, ಜ್ವರಬಂದು ಮೂಲೆಗೆ ಒರಗಿ ತಲೆದಿಂಬು ಹುಡುಕುವಾಗ ,ಗಾಡಿಗಳು ವೇಗವನ್ನು ಮೀರಿ ರಸ್ತೆ ದಾಟುವಾಗ ,ಎಲ್ಲ ಘಟನೆಗಳು ಅಪ್ಪ ಇರಬೇಕಲ್ಲ ಅನ್ನಿಸುತ್ತಿತ್ತು.

ಜಗಳದಲ್ಲಿ ಧನಿಗಳ ಕೈಯಿಂದ ಚೂರಿ ನುಗ್ಗಿ ಒಬ್ಬ ವ್ಯಕ್ತಿ ನೆಲಕ್ಕುರುಳಿದ .ದೂರದಲ್ಲಿ ಅಪ್ಪನನ್ನು ಕರೆದು ಚೂರಿ ಅವರ ಕೈಗಿತ್ತು ಮನೆಗೆ ಹೋಗಿದ್ದರು ದನಿಗಳು ಪೊಲೀಸರು ಮನೆ ಮುಂದೆ ಬಂದು ಅಪ್ಪನನ್ನು ಎಲ್ಲಿಗೋ ಕರೆದುಕೊಂಡು ಹೋದರು .ಕಾಲ ಗತಿಸಿದರು ಅಪ್ಪ ಬರುತ್ತಿಲ್ಲ ಆ ದಿನದ ಊಟಕ್ಕೆ ಸಾಂಬಾರು ಇರಲಿಲ್ಲ ಅಂದಿನಿಂದ ಅನ್ನವೇ ಸಿಗಲಿಲ್ಲ.

ಅಪ್ಪನ ಅಳು ಕೇಳಿದಷ್ಟು ಹೀನವಾಗಿ ಹೋದರು. ದನಿಗಳು ನನ್ನ ಹೊರ ತಳ್ಳಿದರು ಕಾಕಂಬಿಯ ಹಿಂದಿನ ನಿಜದ ಕಥೆ ಅರಿವಾಗಿ ಅಪ್ಪನೆಂದು ನಡೆಯುವ ದಿನ ಯಾವಾಗ ಬರುತ್ತದೆ ಕಾಯುತ್ತಿದ್ದೇನೆ ಕಂಬಿಯ ಹಿಂದಿನ ನೆರಳಿನ ಆಪ್ತ ಬೆಳಕಿನೊಂದಿಗೆ ಜೊತೆಯಾಗುವುದು ಯಾವಾಗ?

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *