Connect with us

LATEST NEWS

ದಿನಕ್ಕೊಂದು ಕಥೆ- ಫಲವೇನು?

ಫಲವೇನು?

ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು. ಕಲ್ಯಾಣಪುರದ ಊರಿನಲ್ಲಿ ಕೆಲವು ನೂರು ಕೋಟಿಗಳನ್ನು ಖರ್ಚು ಮಾಡಿ “ಪ್ರಾಕೃತಿಕ ಪರಂಪರೆಯೊಂದಿಗೆ ಹಳ್ಳಿ ಜೀವನದ ಸೊಗಡಿನ ವಸ್ತುಸಂಗ್ರಹಾಲಯದ” ನಿರ್ಮಾಣಕ್ಕೆ ತಯಾರಿಯೂ ನಡೆಯಿತು .ಈ ವಿಷಯಕ್ಕೆ ಸಂಸತ್ತಿನಲ್ಲಿಅಂಗೀಕಾರವಾದದ್ದು.

ಪೌಲಿ ಮನೆಯ ಮಧ್ಯಭಾಗದಲ್ಲಿ ಒಂದು ‌ಕೃತಕ ಕೆರೆ. ಅಲ್ಲಲ್ಲಿ ಜೀವಂತ ಮನುಷ್ಯರೇ ಎನ್ನುವಂತಹ ವಿಗ್ರಹಗಳು, ಬೇರೆಬೇರೆ ಕೆಲಸದಲ್ಲಿ ನಿರತ ಗೊಂಬೆಗಳು, ಪ್ರಾಣಿ-ಪಕ್ಷಿಗಳ ಜೊತೆ ಜನಬಳಕೆಯ ವಸ್ತುಗಳನ್ನು ಸುರಕ್ಷತೆಯ ಗಾಜಿನ ಪಂಜರದೊಳಗೆ ಇರಿಸಿ ಅದರ ಪ್ರಾಮುಖ್ಯತೆಯನ್ನು ವಿವರಿಸದಿ ದಾಖಲಾತಿಯನ್ನ ನೇತು ಹಾಕಲಾಗಿತ್ತು. ಪ್ರವಾಸಿಗರ ದಂಡು ಬೆಳೆಯಿತು. ಬೊಕ್ಕಸ ತುಂಬುತ್ತಿತ್ತು.

ಆಶ್ಚರ್ಯದಿಂದ ಹುಬ್ಬೇರಿಸಿದವರು ಹಲವರು, ಸರಕಾರವನ್ನು ಹೊಗಳಿದವರು ಇನ್ನುಳಿದವರು. ಆದರೆ ಅಲ್ಲಿಯ ಮಣ್ಣಿನ ಕಣಗಳ ಕೂಗು ಯಾರಿಗೂ ಕೇಳಲಿಲ್ಲ. ಹೆಜ್ಜೆಗಳ ಬಲವಾದ ಹೊಡೆತಕ್ಕೆ ಅದು ಅಪ್ಪಚ್ಚಿ ಆಗಿತ್ತು. ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ ಅತಂತ್ರ ಸ್ಥಿತಿಗೆ ತಲುಪಿದ ಊರು ,ನೀರಿಲ್ಲದ ಬದುಕು ,ಆಹಾರವಿಲ್ಲದ ಪ್ರಾಣಿ-ಪಕ್ಷಿಗಳ ಜೊತೆ ಮನುಷ್ಯನ ಜೀವನ ನರಕವಾಗಿ ಮರಣವಾದದ್ದು ಯಾರ ಅರಿವಿಗೂ ಬರಲಿಲ್ಲ.

ಇಲ್ಲಿಯ ವಸ್ತುಗಳಿಗೆ‌ ಬೆಲೆ ‌ಕೊಟ್ಟು ನೋಡುವ ಬದಲು, ಈ ಊರ ಜನರಿಗೆ ಬದುಕಿನ ಅವಶ್ಯಕತೆ ನೀಡಿದ್ದರೆ ಬದುಕಿರುವಾಗಲೇ ಬದುಕಿನ ನಡುವೆ ಹಾದು ಹೋಗುತ್ತಾ ಕುಶಲೋಪರಿ ವಿಚಾರಿಸಿ ಕಲ್ಯಾಣಪುರವನ್ನ ಜೀವಂತ ಸ್ವರ್ಗವನ್ನಾಗಿ ಮಾಡಬಹುದಿತ್ತು.
ಮರವನ್ನ ಕಡಿದು ಅದರ ಪ್ರತಿಕೃತಿಯನ್ನು ಗಾಜಿನ ಭರಣಿ ಒಳಗಿರಿಸಿ ಜಾಹೀರಾತು ಮಾಡಿ ಹಂಚಿದರೆ ಫಲವೇನು ?….

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *