Connect with us

    LATEST NEWS

    ದಿನಕ್ಕೊಂದು ಕಥೆ- ಕಾಡಿದ ಕನಸು

    ಕಾಡಿದ ಕನಸು

    ದೇಹದ ಸುಸ್ತಿಗೂ, ಮನಸಿನ ಭಾರಕ್ಕೋ, ಕೆಲಸದ ಒತ್ತಡಕ್ಕೂ ,ಯಾವುದೋ ಒಂದು ಕಾರಣಕ್ಕೆ ಅಥವಾ ಇದಲ್ಲದೆ ಇನ್ಯಾವುದೋ ಒಂದು ಕಾರಣಕ್ಕೆ ಕಣ್ಣುರೆಪ್ಪೆಗಳು ಮುಚ್ಚಲಾರಂಭಿಸಿದವು. ದೇಹ ನಿದಿರೆ ಬಯಸುತ್ತಿತ್ತು. ನೆಲದ ಮೇಲೆ ಅಡ್ಡಲಾದಾಗ ಕಣ್ಣು ಒಳಗಿಂದ ಹಾದುಹೋದ ಕನಸೊಂದನ್ನು ಇಲ್ಲಿ ದಾಖಲಿಸಿದ್ದೇನೆ. ” ಬಿಸಿಯ ಉಷ್ಣತೆ ಸೂರ್ಯನಿಂದ ನೆಲಕ್ಕಿಳಿದು ಭೂಮಿಯ ಮೇಲ್ಪದರದಲ್ಲಿ ಹರಿದಾಡುತ್ತಿದೆ.

    ಈ ಜಾಗದಲ್ಲಿ ಮಣ್ಣಿನ ಮೇಲೆ ಮರಳಿನ ಪದರವೇ ದಪ್ಪವಾಗಿದ್ದರು ಬಿಸಿಯ ತೀವ್ರತೆ ಪಾದದೊಳಗಿಂದ ನರದ ಒಳಗೆ ಚಲಿಸಿ ಕ್ಷಣವನ್ನು ಬಿಡುತ್ತಿಲ್ಲ. ಅಲ್ಲೊಂದು ಗಡಿ ಇದೆ ,ಊರಿನದ್ದೋ, ರಾಜ್ಯದ್ದೋ, ದೇಶದ್ದೋ ನಾನರಿಯೆ. ಮುಳ್ಳಿನ ತಂತಿಗಳನ್ನು ಕಂಬಗಳಿಗೆ ಬಿಗಿದು ನಿರ್ಮಿಸಿದ್ದಾರೆ. ಆರಂಭವೂ ಅಂತ್ಯವೂ ಕಾಣುತ್ತಿಲ್ಲ.

    ಎರಡೂ ಕಡೆ ಮರಳಿನ ರಾಶಿಯೇ. ಇದನ್ನು ನಿರ್ಮಿಸಿದಸಿದ ಮಹಾನುಭಾವ ಮಲಗಿದ್ದಾನೆ ಮರಳೊಳಗೆ. ಊರಿಲ್ಲದ ಜಾಗದಲ್ಲಿ, ನೀರಿಲ್ಲದ ನೆಲದಲ್ಲಿ ,ಕಾವಲಿಗೆ ಇಬ್ಬರು. ಬಾಂಧವ್ಯ ಆತ್ಮೀಯದ್ದಾದರೂ ಸ್ಥಳ ಅದಕ್ಕೆ ಅವಕಾಶ ನೀಡಲಿಲ್ಲ. ಮಧುರ ಮಂದಸ್ಮಿತ ಕ್ಕೂ ಅವಕಾಶವಿಲ್ಲ. ಶತ್ರುವಿಗೆ ತೋರುವ ಕರುಣೆಯು ಇಲ್ಲಿ ಸಹ್ಯವಾಗುತ್ತಿಲ್ಲ.

    ದೇಹದೊಳಗಿನ ನೀರು ಖಾಲಿಯಾಗಿ ಗಂಟಲು ಹನಿಗಾಗಿ ಪರಿತಪಿಸಿದ ಗಳಿಗೆ, ತನ್ನಲ್ಲಿ ನೀರಿಲ್ಲದಿದ್ದರೂ ಬೇಲಿಯಾಚೆಗಿನ ಅವನಲ್ಲಿ ಕೇಳೋ ಹಾಗಿಲ್ಲ ಅವಾ ಬಿಕ್ಕಳಿಸುತ್ತಿದ್ದರು ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದರೂ ಕರ್ತವ್ಯ ಮರೆಯೋ ಹಾಗಿಲ್ಲ. ಕರ್ತವ್ಯಕ್ಕಿಂತ ಮಾನವೀಯತೆ ಹೆಚ್ಚಾಗಿ ಬೇಲಿ ದಾಟುವ ಯೋಜನೆ ರೂಪಿತವಾಯಿತು.ಬೇಲಿ ಮುಟ್ಟಿದ್ದಾನೆ ಅಷ್ಟೇ ಅದರೊಳಗಿನ ಕರೆಂಟು ಪ್ರಾಣ ಪಡೆದುಕೊಂಡಿರುವ ಭಯದ ಕ್ಷಣಕ್ಕೆ ನನ್ನೊಳಗಿನ ಪ್ರಾಣವಾಯುವಿನ ಎಚ್ಚರವಾಗಿ ಮನಸ್ಸು ಜಾಗೃತವಾಯಿತು. ಕನಸಿನೊಳಗಿನ ಘಟನೆಯು ಜಾಗ್ರತವಾಗಿದೆ. ಕಾಡುತ್ತಿದೆ ಕನಸು

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *