LATEST NEWS
ದಿನಕ್ಕೊಂದು ಕಥೆ- ಕ್ಷಣದ ಬದುಕು
ಕ್ಷಣದ ಬದುಕು
ನಾ ಮೇಲಿದ್ದೆ. ಅಲ್ಲಿಂದ ರಸ್ತೆಯೊಂದು ನೀರಿನಂತೆ ಜಾಗವನ್ನ ರಿಸಿ ಹರಿದು ಹೋದಂತೆ ಭಾಸವಾಗುತ್ತಿತ್ತು. ಅಂಕುಡೊಂಕುಗಳನ್ನು ಹೊಂದಿ ಇಳಿಜಾರಿನಲ್ಲಿ ಕಪ್ಪಗಿನ ಮಯ್ಯನ್ನು ಹೊದ್ದು ಸಾಗಿತ್ತು. ನಾನು ಗಾಡಿ ಒಳಗಿದ್ದೆ. ಗಾಡಿ ಇಳಿಯುತ್ತಿತ್ತು.
ಪಕ್ಕದಲ್ಲಿ ಯಾವುದು ಸರಕು ತುಂಬಿದ ಲಾರಿಯೊಂದು ವೇಗವಾಗಿ ಹಾದುಹೋಯಿತು. ಅವನ ವೇಗವೇ ಭಯ ಹುಟ್ಟಿಸುತ್ತಿತ್ತು. ಆಗ ಸಂಭವಿಸಿತು ಆ ಘಟನೆ. ನಿಯಂತ್ರಣ ತಪ್ಪಿ ಲಾರಿ ಮಗುಚಿಬಿದ್ದು ರಸ್ತೆಗೆ ಒರೆಸಿಕೊಂಡು ಹೋಗಿ ತಡೆಗೋಡೆಗೆ ಗುದ್ದಿತ್ತು. ಕತ್ತಲೆಯ ವಿಧಿ ಅವನ ಕಣ್ಣಿಗೆ ಕಾಣಲಿಲ್ಲವೇ ಏನೋ. ಅಂಬುಲೆನ್ಸ್ ಒಂದು ಶಬ್ದ ಮಾಡುತ್ತಾ ಬಂದಿತ್ತು. ನಾವು ಸಾಗಿದೆವು ಮುಂದೆ.
ಮುಂದೆ ಘಟಿಸುವ ಘಟನೆಯೊಂದರ ಬಗ್ಗೆ ಲಾರಿಯಲ್ಲಿದ್ದ ಚಾಲಕನಿಗೆ ಆಗಲಿ ನಿರ್ವಾಹಕನಿಗಾಗಲಿ ಅದರ ಬಗ್ಗೆ ಊಹೇನೂ ಇರಲಿಲ್ಲ .ಬದುಕು ಮುಚ್ಚಿದ ಕೋಣೆ. ನಮ್ಮ ಹೆಜ್ಜೆ ಜಾಗ್ರತೆಯಾಗಿ ದೃಢವಾಗಿದ್ದರೆ ತೆರೆದು ಬದುಕಬಹುದು .ಇಲ್ಲವಾದರೆ ಸಮಾಧಿಯಾಗಬೇಕಾದಿತು. ಸುಟ್ಟು ಹೋದ ಮನಸ್ಸು ಮತ್ತೆ ಚಿಗುರಬೇಕು. ಆಗ ಮಾತ್ರ ಬದುಕನ್ನ ನಾವೇಣಿಸಿದಂತೆ ಸಾಗಿಸಬಹುದು.
ಧೀರಜ್ ಬೆಳ್ಳಾರೆ