Connect with us

BANTWAL

ಪುದು ಗ್ರಾಮಪಂಚಾಯತ್ ನ ಹಾಲಿ ಸದಸ್ಯೆ ಹೃದಯಾಘಾತದಿಂದ ನಿಧನ

ಬಂಟ್ವಾಳ ಎಪ್ರಿಲ್ 30: ಪುದು ಗ್ರಾಮ ಪಂಚಾಯತ್ ನ ಹಾಲಿ ಸದಸ್ಯೆಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ನಡೆದಿದೆ. ಮೃತರನ್ನು ಲಕ್ಷ್ಮಿ (53) ಎಂದು ಗುರುತಿಸಲಾಗಿದೆ.


ಕುಮ್ಡೇಲು ನಿವಾಸಿಯಾದ ಅವರು ಮಾರಿಪಳ್ಳ ಪೇರಿಮಾರ್ ವಾರ್ಡ್ ನಿಂದ ಸತತ ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಾರ್ಡ್ ಮತ್ತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಲಕ್ಷ್ಮೀ ಅವರು, ಹಾಲಿ ಪುದು ಪಂಚಾಯತಿನ ಸದಸ್ಯರೂ ಆಗಿದ್ದಾರೆ.