Connect with us

LATEST NEWS

ದಿನಕ್ಕೊಂದು ಕಥೆ- ಭ್ರಮಾಲೋಕ

ಭ್ರಮಾಲೋಕ

ಗೋಡೆಯ ಮೂಲೆಯಲ್ಲಿ ನಿಂತಿರುವ ಟೀವಿಯೊಳಗಿನ ದೃಶ್ಯವೊಂದು ಆ ಮನೆಯ ಹೆತ್ತವರಲ್ಲಿ ಆಸೆ ಹುಟ್ಟಿಸಿದೆ. ಪ್ರತಿಭಾ ಪ್ರದರ್ಶನದ ವೇದಿಕೆ, ಅದ್ಭುತ ಬೆಳಕಿನ ವಿನ್ಯಾಸ, ಯಾವುದು ಮಗುವಿನ ತುಂಟಾಟ ,ತೊದಲು ನುಡಿ ,ಕುಣಿತದ ನಾಜೂಕು ,ರಾಗದ ಆಲಾಪ, ಆಗಾಗ ಹೊಗಳುವಿಕೆ, ಚಪ್ಪಾಳೆಗಳ ಸುರಿಮಳೆ, ಅಮ್ಮನ ಕಣ್ಣಲ್ಲಿ ಕಣ್ಣೀರು ಹರಿಸುವ ಪ್ರಯತ್ನ, ಮತ್ತೆ ಮತ್ತೆ ಅದೇ ದೃಶ್ಯವನ್ನು ಟೀವಿಯೊಳಗೆ ತೋರಿಸುತ್ತಿದ್ದಾರೆ.

ಈ ಮನೆಯೊಳಗಿನ ಹಿರಿ ಮನಸ್ಸುಗಳಿಗೆ ನಾವು ಅದರೊಳಗಾಗಬೇಕು ಅನ್ನೋ ಆಸೆ ಹುಟ್ಟಿತು. ಈಜುತ್ತಿದ್ದ ಮಗಳನ್ನು ನೃತ್ಯದ ತರಗತಿಯೊಳಗೆ ತಳ್ಳಿದರು, ಮಣ್ಣಿನಲ್ಲಿ ಆಟವಾಡುತ್ತಿದ್ದ ಮಗನನ್ನು ನೃತ್ಯ ಶಾಲೆಗೆ ನೂಕಿದರು. ಒತ್ತಡಗಳ ಹೆಬ್ಬಂಡೆಗಳನ್ನು ಹೊರಿಸಿ ಕಾಯುತ್ತಿದ್ದರು. ಕಣ್ಣೀರು ತುಂಬಿ ಅಭ್ಯಾಸ ಆರಂಭವಾಯಿತು, ಟೀವಿಯೊಳಗೆ ಪ್ರವೇಶವು ಸಿಕ್ಕಿತು. ಜಗತ್ತೇ ಗೆದ್ದ ಖುಷಿ.

ಇವರೊಳಗಿನ ಪ್ರತಿಭೆ ಇನ್ನೂ ಬೆಳೆಯಬೇಕಿದ್ದ ಕಾರಣ ಎರಡನೇ ಹಂತದಿಂದ ನಿರ್ಗಮಿಸಬೇಕಾಗಿತ್ತು .ಮಕ್ಕಳ ಮೊಗದಲ್ಲಿ ಮಂದಹಾಸ ,ಹೆತ್ತವರ ಸಿಟ್ಟು ,ಬೈಗುಳಗಳ ಜೊತೆ ಒಂದಷ್ಟು ಹೊಡೆತ. ಸಮಾಜದಲ್ಲಿ ಮುಖ ತೋರಿಸೋದು ಹೇಗೆ ಅನ್ನುವ ಭಾವನೆ ಅವರೊಳಗಡೆ. ಮನೆಯೊಳಗಡೆ ಅವರಿಬ್ಬರ ಮುಂದಿನ ಯೋಚನೆ ಯೋಜನೆಗಳ ಪಟ್ಟಿ ತಯಾರಾಗುತ್ತಿದೆ. ಮಕ್ಕಳು ಹೊರಗಡೆ ಮಣ್ಣಿನಲ್ಲಿ ಆಟವಾಡುತ್ತಿದ್ದಾರೆ…..

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *