LATEST NEWS
ದಿನಕ್ಕೊಂದು ಕಥೆ- ಮಂದ ಬುದ್ಧಿ
ಮಂದ ಬುದ್ಧಿ
ಅವನಿಗೆ ಮಾರಾಟ ಮಾಡಬೇಕಾದ ಜಾಗದ ಅರಿವಿಲ್ಲ. ಇಷ್ಟು ದಿನದ ಅಭ್ಯಾಸವೂ ಇಲ್ಲ. ಹೊಸದು ಹೊಂದಿಕೊಳ್ಳಲೇಬೇಕು. ತನ್ನ ಮನೆಯಲ್ಲಿ ಬೆಳೆದ ತರಕಾರಿ ಬೇರೆಯವರ ಮನೆಗೆ ಸಾಗಲಿ ಎಂದು ರಸ್ತೆ ಬದಿ ನಿಂತು ಕೂಗುತ್ತಿರುತ್ತಾನೆ.
ಬುದ್ಧಿ ಸ್ವಲ್ಪ ಮುಂದಾಗಿದೆ. ನಾಲಗೆ ಸ್ವಲ್ಪ ತೊದಲುತ್ತಿದೆ. ಹತ್ತಿರದವರಿಗೆ ಅರ್ಥವಾಗುವುದಿಲ್ಲ. ಕಿವಿಗೆ ಕೇಳುವುದಿಲ್ಲ ಮನಸ್ಸಿಗೆ ಖಂಡಿತ ನಾಟುತ್ತದೆ. ಅವನ ಮನೆಯಲ್ಲಿ ಸ್ವಂತಕ್ಕೆ ಬೆಳೆದ ನಾಲ್ಕು ತರಕಾರಿಗಳನ್ನು ಮಾರಾಟಕ್ಕಿಟ್ಟಿದ್ದಾನೆ. ದುಡ್ಡು ಬೇಕಾಗಿದೆ ಅಮ್ಮನಿಗೆ.
ರಾತ್ರಿಯ ಊಟಕ್ಕೆ ನೀರು. ಜೀವನದಲ್ಲಿ ಸೋತಿದ್ದೇನೆ, ಬದುಕು ಕಷ್ಟಕರ ಅನ್ನುವ ನಿರಾಶೆ ಭಾವವಿಲ್ಲ .ಛಲವಿದೆ .ರೋಗವೇ ಅಮ್ಮನನ್ನು ಬಿಟ್ಟು ದೂರ ಚಲಿಸಲಾರಂಭಿಸಿದೆ ಇವನ ಶ್ರಮವ ಕಂಡು….
ಧೀರಜ್ ಬೆಳ್ಳಾರೆ