LATEST NEWS
ದಿನಕ್ಕೊಂದು ಕಥೆ- ಬಿಸಿಲು
ಬಿಸಿಲು
ಬದಲಾವಣೆ ಆಗುತ್ತಾ ಇರುತ್ತೇನೆ ನಾನು. ಎಲ್ಲಾ ಕಾಲದಲ್ಲೂ ನನ್ನನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಕಾಲಕ್ಕೆ ಸರಿಯಾಗಿ ಪುರಸ್ಕರಿಸುತ್ತಾರೆ, ತಿರಸ್ಕರಿಸುತ್ತಾರೆ ಕೂಡ. ಬಿಸಿಲಿದ್ದರೆ ಗಿಡ ಹಸಿರಾಗಿ ಬೆಳೆಯುತ್ತದೆ, ಒಣಗಿ ಬಾಡಿ ಸುಟ್ಟು ಕೂಡಾ ಹೋಗುತ್ತದೆ.
ಝಳಕ್ಕೆ ದೇಹದಲ್ಲಿ ಬೆವರು ಧಾರಾಕಾರವಾಗಿ ಹರಿಯುತ್ತದೆ, ಇಬ್ಬನಿ ಕರಗಿಸಿ ಜೋರು ಚಳಿಗೆ ಬೆಚ್ಚನೆಯ ತಾಪ ನೀಡುತ್ತದೆ .ಗಟ್ಟಿಯಾಗಿದ್ದ ನೀರು ತಾಪಕ್ಕೆ ಕರಗುತ್ತದೆ. ಚಲಿಸುವ ನೀರು ಆವಿಯಾಗಿ ಮೋಡವಾಗಿ ಗಟ್ಟಿಯಾಗುತ್ತದೆ. ಯಾಕಪ್ಪಾ ಈ ಬಿಸಿಲು ಅನ್ನೋರು ಅವರೇ, ಒಮ್ಮೆ ಬಿಸಿಲು ಬರಲಿ ಅನ್ನೋರು ಇವರೇ. ಇದು ನಾನು ದಿನವೂ ಕೇಳುವ ಮಾತುಗಳು…
ನಾನು ಒಂದು ದಿನವೂ ಬೇಸರಿಸಿಕೊಂಡಿಲ್ಲ. ಓಡಿ ಹೋಗಿಲ್ಲ. ಮಾಡೋ ಕೆಲಸವನ್ನು ಬಿಟ್ಟಿಲ್ಲ. ನಿನಗೇನು ದಾಡಿ ….ಅಂತ ಎಚ್ಚರಿಸುವ ಹಾಗಾಯಿತು, ಟೆರೇಸಿನ ಮೇಲೆ ಕುಳಿತಿದ್ದ ನನ್ನ ಮುಖಕ್ಕೆ ಬಡಿಯುತ್ತಿದ್ದ ಕಿರಣಗಳು .ಅರ್ಧದಲ್ಲಿ ಬಿಟ್ಟು ಬಂದ ಕೆಲಸವನ್ನು ಪೂರ್ತಿಗೊಳಿಸಲು ಮತ್ತೆ ಕೋಣೆಗೆ ತೆರಳಿದೆ
ಧೀರಜ್ ಬೆಳ್ಳಾರೆ