LATEST NEWS
ದಿನಕ್ಕೊಂದು ಕಥೆ- ಬಾಡು
ಬಾಡು
ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಒಂದುವಾರದಿಂದ ಸೂರ್ಯ ಬೆಳಗ್ಗಿನಿಂದ ಸಂಜೆಯವರೆಗೂ ಮೋಡದ ಮರೆಯಲ್ಲಿ ಚಲಿಸುತ್ತಿದ್ದಾನೆ. ಪ್ರಕಾಶವನ್ನು ಮೋಡ ಕರಗಿಸಲು ಬಳಸುತ್ತಿದ್ದಾನೆ. ಬಿಸಿಲಿನ ಧಗೆಯು ನೆಲಕ್ಕೆ ಹಂಚಿಕೆಯಾಗುತ್ತಿಲ್ಲ .ಕಾರಣ ಗೊತ್ತಿಲ್ಲ. ಇಂದು ಸಂಜೆ ಶರಧಿಯ ತೀರದಲ್ಲಿ ಸೂರ್ಯ ಸಿಕ್ಕಾಗ ಕಾರಣ ಕೇಳಿದ್ದಕ್ಕೆ ಆತ ವಿಳಾಸವನ್ನು ನೀಡಿದ.
ಆ ಜಾಗವನ್ನು ತಲುಪಿದಾಗಸೂರ್ಯ ಮಾಡಿದ ಕಾರ್ಯ ಶ್ಲಾಘನೀಯವಾದುದು ಅನ್ನಿಸಿತು. ಹೇಳಿದ ವಿಳಾಸ ತಲುಪುವವರಿಗೆ ಅಲ್ಲಿ ಮಲ್ಲಿಗೆ ಮಾರಾಟವಾಗಲು ಕಾಯುತ್ತಿತ್ತು. ಛತ್ರಿಯೊಂದು ಬಿಚ್ಚಿ ಅದರ ನೆರಳು ಮಲ್ಲಿಗೆಯ ವಿರುದ್ಧ ದಿಕ್ಕಿನ ನೆಲಕ್ಕೆ ಬೀಳುತ್ತಿತ್ತು. ನೆರಳಿನಲ್ಲಿ ಕುಳಿತ ಆ ಹುಡುಗಿ ಶಾಲೆಯ ಪಠ್ಯ ಪುಸ್ತಕವನ್ನು ಓದುತ್ತಿದ್ದಾಳೆ. ಗಿಡದಲ್ಲಿ ತಾನು ಬಾಡದೇ ಮಾರಾಟವಾಗಿ ನಡೆದಾಡುವ ಮಲ್ಲಿಗೆಯ ಜೀವನವನ್ನು ಬೆಳಗಲು ಕಾತರಿಸುತ್ತಿದೆ.
ಅರಳಿದ ಮಲ್ಲಿಗೆ ಬಾಡುವುದಕ್ಕಿಂತ ಮೊದಲು ತಾನು ಮಾರಾಟವಾಗಿ ಬಾಡುತ್ತಿರುವ ಈ ಜೀವಂತ ಮಲ್ಲಿಗೆಯನ್ನ ಮತ್ತೆ ಅರಳಿಸಲು ಕಾಯುತ್ತಿದೆ …..
ಇದು ಒಂದೂರಿನ ಮಲ್ಲಿಗೆ ಗುಲಾಬಿ ಚೆಂಡು ಹೂಗಳ ಕಥೆಯಲ್ಲ ಹಲವಾರು ಮಲ್ಲಿಗೆ ಗಳಿವೆ ಗುರುತಿಸಿ ಸಾಗಿಸುವ ದಾರಿಯನ್ನು ತೋರಿಸಬೇಕಾದುದು ನಮ್ಮ ಕಾರ್ಯ.
ಧೀರಜ್ ಬೆಳ್ಳಾರೆ