Connect with us

LATEST NEWS

ದಿನಕ್ಕೊಂದು ಕಥೆ- ವಿಚಿತ್ರ ಆಲೋಚನೆ

ವಿಚಿತ್ರ ಆಲೋಚನೆ

ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದ ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ.

ಉಳಿದವರು ಒಂದು ವಿಷಯವನ್ನು ಗ್ರಹನವೆಂದು ಮಾತನಾಡುತ್ತಿದ್ದರೆ ಆತನಿಗೆ ಅದರಲ್ಲಿ ಯಾವ ಗಹನತೆಯೂ ಕಾಣುವುದಿಲ್ಲ. ಹೊರಗಿನ ಲೋಕಕ್ಕೂ ನನಗೂ ಯಾವುದೇ ಸಂಬಂಧ ಇಲ್ಲದ ತರಹ ವರ್ತಿಸುತ್ತಾನೆ. ಕೆಲವೊಂದು ಸಲ ಜೊತೆಗಾರ ಜೊತೆ ಅವರ ಸಂತೋಷಕ್ಕಾಗಿ ಹೊಂದಿಕೊಳ್ಳುತ್ತಾನೆ.

ಅವನಿಗೆ ವಿಭಿನ್ನತೆಯಿಂದ ಇರುವುದರಲ್ಲೇ ಏನೋ ಸಂತೋಷ ಸಿಗುತ್ತದೆ ಅನಿಸುತ್ತದೆ .ಅವನನ್ನ ಈ ಬಗ್ಗೆ ಕೇಳಿದರೆ ಅವನು ತನ್ನದೇ ಒಂದು ವಾದವನ್ನ ಮಂಡಿಸುತ್ತಾನೆ. “ನೋಡು ಪ್ರತಿಯೊಂದು ವಿಷಯಕ್ಕೂ ಅನೇಕ ಮುಖಗಳಿರುತ್ತವೆ. ತೋರದ ಸತ್ಯಗಳು ಇರುತ್ತದೆ. ಒಬ್ಬರಿಗೆ ಬಂದ ಅನುಭವ ಬೇರೊಬ್ಬರಿಗೆ ಬರಬೇಕೆಂದೇನೂ ಇಲ್ಲ. ಬಂದರೂ ಅವರಿಗೆ ಅರ್ಥವಾಗುವುದಿಲ್ಲ .ಮಳೆಗಾಲದಲ್ಲಿ ಎಲ್ಲರೂ ನವಿಲಾಗುವುದಿಲ್ಲ. ವಸಂತಕಾಲದಲ್ಲಿ ಕೋಗಿಲೆ ಮಾತ್ರ ಕೂಗುವುದಲ್ಲಾ,ಕಪ್ಪಗಿನ ಮೋಡವನ್ನು ಕಂಡಾಗ ಕೆಲವರು ದುಗುಡಗೊಳ್ಳಬಹುದು ಎಲ್ಲರಲ್ಲ. ಹೊರಗಿನ ವಾತಾವರಣ ನಮ್ಮೊಳಗನ್ನು ಬದಲಾಯಿಸಬಹುದು ಅನ್ನೋದನ್ನು ನೀನು ಒಪ್ಪಿದರೂ ನಾನು ಒಪ್ಪಲಾರೆ .

ಕಪ್ಪು ಮೋಡಗಳ ಎಡೆಯಿಂದ ತಿಳಿಯಾದ ಗೆರೆಯ ಮಿಂಚು ಖಂಡಿತಾ ಇಣುಕುತ್ತದೆ”. ಅವನ ಮಾತು ಹೌದು ಎನ್ನಿಸಿದರು ವಿಚಿತ್ರವಾದವು. ಅವನೊಂದಿಗೆ ವಾದಕ್ಕಿಳಿಯುವುದಕ್ಕಿಂತ ನಗುತ್ತಾ ಮುಂದೆ ಸಾಗುವುದು ಒಳಿತು. ನೀವೇನಂತೀರಿ ವಾದ ಮಾಡಬೇಕಾ ನಾನು …?

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *