LATEST NEWS
ದಿನಕ್ಕೊಂದು ಕಥೆ- ನಗು
ನಗು
ಅವತ್ತು ಆ ಊರನ್ನ ಮುಳುಗಿಸಿದ ಮಳೆ ನನಗೊಮ್ಮೆ ಸಿಗಬೇಕಿತ್ತು .ಎಷ್ಟು ಮನೆ, ಜೀವಗಳು ತೇಲಿ ಹೋಗಿದ್ದವು .ಒಂದಷ್ಟು ಬದುಕು ಉಳಿಯಿತು ಆದರೆ ಆ ಉಳಿದವರ ಜೀವಕ್ಕೆ ಜೀವವಾಗಿದ್ದವರು ಇಲ್ಲವೆಂದಮೇಲೆ ಬದುಕು ಸಾಗುವುದು ಹೇಗೆ? ಅನ್ನೋದು ನನ್ನ ಪ್ರಶ್ನೆ.
ನನಗೆ ಅಪ್ಪ ಪ್ರೀತಿಯಿಂದ ಕೊಡಿಸಿದ ಕೈಗಡಿಯಾರ ಸಂತೆಯಲ್ಲಿ ಕಳೆದುಹೋದಾಗ ಹುಡುಕಿ ಹುಡುಕಿ ಸಿಗದೇ ಅತ್ತಿದ್ದೇನೆ. ಅಮ್ಮ ಕೊಡಿಸಿದ ಅಂಗಿಯ ಮೇಲೆ ಯಾರು ಶಾಹಿ ಚೆಲ್ಲಿದ್ದಕ್ಕೆ ಮತ್ತೆ ಧರಿಸಲಾಗುವುದಿಲ್ಲ ಎಂದದ್ದಕ್ಕೆ ಹಲವು ರಾತ್ರಿ ಬೇಸರಿಸಿದ್ದೇನೆ.
ಪಕ್ಕದ ಮನೆಯವರ ಅಪಘಾತದ ಸುದ್ದಿಗೆ ಒಮ್ಮೆ ಕುಸಿದಿದ್ದೇನೆ. ಇದು ನನ್ನದಲ್ಲದ ನನ್ನ ಕಥೆ. ಆದರೆ ಆ ಊರಿನ ಜೀವಗಳದ್ದು ಸ್ವಂತ ಕತೆಯಲ್ಲವೆ?. ಅದರ ನೋವೆಷ್ಟಿರಬಹುದು. ಕಣ್ಣೆದುರು ಕಂಡ ತನ್ನವರ ಸಾವು, ತನ್ನ ಸಾವಿನವರೆಗೂ ಮರೆಯಲಾದಿತೆ.
ಈಗ ಮತ್ತೆ ಆ ಊರು ಬೆಳೆಯುತ್ತಿದೆ. ಮನಸ್ಸುಗಳು ಅರಳುತ್ತಿವೆ. ಮನೆಗಳು ಎದ್ದುನಿಂತಿದೆ. ಇವೆಲ್ಲವನ್ನು ಮೀರಿದ ಚೈತನ್ಯ ಬದುಕಿಗೆ ಬರುತ್ತೆ ಅನ್ನೋದು ನಿಜ ಆದರೂ ಕಳೆದುಕೊಂಡ ನೋವು…ಕಂಡ ಆ ದೃಶ್ಯ…..
ಧೀರಜ್ ಬೆಳ್ಳಾರೆ