Connect with us

LATEST NEWS

ದಿನಕ್ಕೊಂದು ಕಥೆ- ಆಗುವುದೆಲ್ಲಾ ಒಳ್ಳೆಯದಕ್ಕೆ

ಆಗುವುದೆಲ್ಲಾ ಒಳ್ಳೆಯದಕ್ಕೆ

ಒಮ್ಮೊಮ್ಮೆ ನಾವು ಯೋಚಿಸುವ ಸ್ಥಿತಿ ಮತ್ತು ಸಮಯ ನಮ್ಮನ್ನು ಧಿಗಿಲಿಗೀಡು ಮಾಡುತ್ತೆ. ನನಗೂ ಹಾಗೆ ಆಗಿತ್ತು. ಕೈಯಲ್ಲಿದ್ದ ಚಂದದ ಕೆಲಸವನತನು ಒಂದು ಕ್ಷಣದ ನಿರ್ಧಾರದಲ್ಲಿ ಬೇಡವೆಂದು ತೊರೆದು ಹೊರಬಂದಿದ್ದೆ. “ದೊಡ್ಡ ಕನಸುಗಳು ಇರುವಾಗ ಸಣ್ಣದನ್ನು ಕಳೆದುಕೊಳ್ಳಬೇಕಾಗುತ್ತದೆ “ಎನ್ನುವುದು ಯಾರೋ ಹೇಳಿದ ಮಾತಾಗಿತ್ತು. ಅದನ್ನು ಆಗಾಗ ನೆನೆದು ಮಾಡಿದ ಕಾರ್ಯವನ್ನು ಖುಷಿಪಡುತ್ತಾ ಇದೆ. ಆದರೆ ವರ್ಷ ಒಂದಾದರೂ ಯಾವುದೋ ಕೆಲಸದ ಕಡೆಗಿನ ಕರೆ ಬರುವುದು ಕಾಣಲಿಲ್ಲ ,ಅವಕಾಶವೇ ಸಿಗುತ್ತಿಲ್ಲ.

ಮನೆಯಲ್ಲೇ ಕುಳಿತು ನನ್ನ ಸಮಾಧಾನಕ್ಕಾಗಿ “ನಾನು ಮೊದಲು ಇದ್ದ ಕೆಲಸವನ್ನು ಮಾಡುತ್ತಿದ್ದರೆ ತುಂಬಾ ಕಷ್ಟವಾಗುತ್ತಿತ್ತು, ನನ್ನ ಏಳಿಗೆ ಆಗಿರಲಿಲ್ಲ . ತುಂಬಾ ಜನ ಬಿಟ್ಟು ಹೋಗಿದ್ದಾರೆ, ತುಂಬಾ ಜನ ಕೆಲಸ ಇಲ್ಲದೆ ಮನೆಯಲ್ಲೇ ಇದ್ದಾರೆ” ಹೀಗೆಲ್ಲಾ ಯೋಚನೆಗಳನ್ನು ಹುಟ್ಟುಹಾಕಿ ನೆಮ್ಮದಿಯ ಉಸಿರು ಬಿಡುತ್ತಿದ್ದೆ. ಕೆಲಸ ಒಂದಾದರೂ ಸಿಗಲಿ ಎಂದು ಸಿಕ್ಕಿದ ಕಡೆಗೆಲ್ಲ ಅರ್ಜಿ ಸಲ್ಲಿಸಿದೆ .ಸುದ್ದಿ ಇಲ್ಲ.

ದೇವರಿಗೆ ಬೈದೆ “ಮೊದಲಿದ್ದ ಕೆಲಸವನ್ನು ಬಿಡುವಂತೆ ಮನಸ್ಸು ಯಾಕೆ ಕೊಟ್ಟೆ” ಅಂತ .ನನ್ನ ಸುತ್ತಮುತ್ತ ಬೋಧಕರ ವರ್ಗವೇ ಹುಟ್ಟಿಕೊಂಡಿತ್ತು ಯಾಕೆಂದರೆ ನನ್ನಲಿ ಕೆಲಸವಿರಲಿಲ್ಲ. ಆ ದಿನ ಕರೆಯೊಂದು ಬಂತು. ಮುಗ್ಧ ಮನಸ್ಸಿನ ಪ್ರಾಂಜಲ ಹೃದಯದ ಮಕ್ಕಳೊಂದಿಗೆ ಬೆರೆತು ಕಲಿಸುವ ಕೆಲಸ.

ನಿರೀಕ್ಷಿಸಿದ ಸಂಬಳ. ಒಪ್ಪಿಕೊಂಡೆ. ಇವತ್ತು ಅನ್ನಿಸಿತು ಆಗೋದೆಲ್ಲ ಒಳ್ಳೇದಕ್ಕೆ. ನಾ ಸಾಗಿದೆ ದಾರಿಗಳಲ್ಲಿ ಆದ ಅನುಭವಗಳು ಕಲಿತ ವಿಚಾರಗಳನ್ನು ಜೊತೆಗೆ ಬದುಕು ನನಗೆ ಕಲಿಸಿದ ಪಾಠಗಳನ್ನು ಮಕ್ಕಳಿಗೆ ಕಲಿಸಲು ಬ್ಯಾಗು ತುಂಬಿಸಿದೆ….” ಸತ್ಯ ಹೇಳ್ತೇನೆ, ಆಗುವುದೆಲ್ಲಾ ಒಳ್ಳೆಯದಕ್ಕೆ. ಮುಂದಾಗುವ ಒಳಿತು ಈ ಕ್ಷಣದಲ್ಲಿ ಅರಿವಿಗೆ ಬರುವುದಿಲ್ಲ. ಕಾಯಬೇಕು ಅಷ್ಟೆ

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *