LATEST NEWS
ದಿನಕ್ಕೊಂದು ಕಥೆ- ಮಣ್ಣೊಳಗಿನ ಬಣ್ಣ

ಮಣ್ಣೊಳಗಿನ ಬಣ್ಣ
ನಾನು ರಸಾಯನಶಾಸ್ತ್ರಜ್ಞನಲ್ಲ, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಆದರೆ ಅದ್ಭುತವೊಂದನ್ನ ಕಂಡು ಹಿಡಿದಿದ್ದೇನ. ನಿಜ ಹೇಳಬೇಕೆಂದರೆ ಇದು ನಿಮಗೂ ಗೊತ್ತಿರೋದೆ. ನಾವು ನಡೆದಾಡೋ ನೆಲವಿದೆಯಲ್ಲಾ ಅದೊಂದು ಅದ್ಭುತ.
ಕಣ್ಣಿಗೆ ಕಾಣೋ ಬಣ್ಣ ಒಂದೋ ಎರಡೋ ಆದರೆ ಅದರೊಳಗೆ ಬಣ್ಣಗಳ ಸಾಮ್ರಾಜ್ಯವೇ ಇದೆ. ಕಾಮನಬಿಲ್ಲು ಮಣ್ಣಿನಿಂದಲೇ ಬಣ್ಣವನ್ನು ಎರವಲು ಪಡೆದುಕೊಂಡಿದೆಯೇನೋ. ನಾವು ನೋಡುವ ಗಿಡಗಳಿಗೊಂದೊಂದು ಬಣ್ಣ, ಅದರ ತೊಗಟೆಯೊಂದೊಂದು ಚಂದ,ಎಲೆಗಳಲ್ಲಿ ಚಿತ್ತಾರ,ಹೂವುಗಳೋ ಬಣ್ಣವೋ ಬಣ್ಣ.

ಎಲ್ಲವೂ ನೆಲದಿಂದ ಬೇರಿನ ಮೂಲಕ ಸಾಗಿದೆ .ಮಣ್ಣು ತಾ ನೀಡಿದ ಬಣ್ಣವನ್ನು ಎಂದೂ ಹೇಳಿಕೊಂಡಿಲ್ಲ. ಮತ್ತೆ ಬಣ್ಣಗಳಯ ಮಣ್ಣಿನೊಳಕ್ಕೆ ಸೇರುತ್ತದೆ.ಮಣ್ಣು ಅದನ್ನ ಇನ್ನೊಂದು ಬೇರಿಗೆ ಸಾಗಿಸುತ್ತದೆ. ಬಣ್ಣ ಚಲಿಸುತ್ತಲೇ ಇದೆ. ಅದೊಂದು ವೈವಿದ್ಯಮಯ ಲೋಕ, ಬಣ್ಣಗಳೂ ಬದುಕುತ್ತಿವೆ ಮಣ್ಣ ಗರ್ಭದೊಳಗೆ