LATEST NEWS
ದಿನಕ್ಕೊಂದು ಕಥೆ- ಬಡಿತ

ಬಡಿತ
“ಅವನು ಬಂದು ಕರೆದಾಗ ಹೊರಡಲೇ ಬೇಕು.ಇಲ್ಲಪ್ಪ ಇನ್ನೊಂದೆರಡು ಸ್ವಲ್ಪ ಕೆಲಸ ಇದೆ ಆಮೇಲೆ ಬರ್ತೇನೆ ಅನ್ನೋಕೆ ಅವನು ನಮ್ಮ ಪರಿಚಿತನಲ್ಲ. ಅಪರಿಚಿತ ಆದರೂ ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅನ್ನೋದು ನಮಗೆ ಗೊತ್ತಿರುತ್ತೆ.
ಆದರೂ ಅವನ ಜೊತೆಗೆ ಹೋಗೋದು ಅಂದರೆ ಅದು ಜೀರ್ಣಿಸಿಕೊಳ್ಳಲಾಗದ ಸತ್ಯ. ಕೆಲವೊಮ್ಮೆ ನಮ್ಮ ಅಭ್ಯಾಸಗಳೇ ಅವನನ್ನು ಬೇಗ ಕರೆಸಿಕೊಳ್ಳಬಹುದು ನಿಧಾನವೂ ಮಾಡಬಹುದು. ಆದರೆ ಹೋಗೋದು ತಪ್ಪಿದ್ದಲ್ಲ. ನಿನ್ನ ಕನಸುಗಳು ಆಸೆ-ಆಕಾಂಕ್ಷೆಗಳು ಬದುಕಿನೊಂದಿಗಿನ ಅವಿನಾಭಾವ ಸಂಬಂಧ ಎಲ್ಲವೂ ದೊಡ್ಡದೇ, ಆದ್ರೆ ಈ ಕ್ಷಣವನ್ನು ಅನುಭವಿಸದಿದ್ದರೆ ಅವೆಲ್ಲ ವ್ಯರ್ಥ ಅಲ್ವಾ ?.

ನಾಳೆ, ಆಮೇಲೆ ಅನ್ನೋದನ್ನ ಬಿಟ್ಟು ಈ ಕ್ಷಣ ಬದುಕು. ಇದು ಮಾತ್ರ ಸತ್ಯ. ಒಳಗೆಳೆದುಕೊಂಡ ಉಸಿರು ಮತ್ತೆ ಹೊರಬಂದರೆ ಅದು ನಿನ್ನ ಪುಣ್ಯ. ಅದನ್ನರಿತು ಉಸಿರಾಡು”. ಇವಿಷ್ಟನ್ನು ನಿಧಾನವಾಗಿ ಹೇಳಿದ ಆ ಹಿರಿಯರುಹೊರಟೇ ಬಿಟ್ರು. ನಾನು ಹಿರಿಯರು ಅಂದದ್ದು ಅವರ ವಯಸ್ಸಿಗಲ್ಲ !ಅವರು ಯೋಜನೆಗೆ. ಅವರನ್ನು ನಾನು ಕರೆದು ಮಾತನಾಡಿದ್ದಲ್ಲ.
ನನ್ನ ನೋಡಿದ ಕೂಡಲೇ ಮಾತನ್ನ ಆರಂಭಿಸಿದರು. ಅದಕ್ಕೊಂದು ಅಲ್ಪವಿರಾಮವನ್ನು ನೀಡಿ ಹೊರಟೇ ಬಿಟ್ರು. ಅಮ್ಮ ಬೆಳಗ್ಗೆ ಹೇಳಿದ್ರು” ಪೇಟೆಗೆ ಹೋಗಿ ಸ್ವಲ್ಪ ಹಣ್ಣು ತಾ”
“ನಾಳೆ ನೋಡುವಾ ಅಮ್ಮ” ಎಂದಿದ್ದೆ. ಬೇಡಪ್ಪ ಈಗಲೇ ಹೋಗ್ತೇನೆ. ನಾಳೆ ಅನ್ನೋದು ಸಿಕ್ಕಿದರೆ …….ಅದನ್ನ ನಾಳೆ ನೋಡುವ .ಈಗ್ಯಾಕೆ..
ಧೀರಜ್ ಬೆಳ್ಳಾರೆ