LATEST NEWS
ದಿನಕ್ಕೊಂದು ಕಥೆ- ಕೊನೆಯ ಕ್ಷಣ
ಕೊನೆಯ ಕ್ಷಣ
ಉಸಿರು ಕಟ್ಟುತ್ತಿದೆ . ಗಾಳಿ ಬೇಕೆನಿಸಿದೆ. ಎದೆಯೊಳಗಿನ ಗೂಡಿಗೆ ಹೋಗುವ ದಾರಿಯನ್ನು ಯಾರೋ ಮುಚ್ಚಿದ್ದಾರೆ. ಅದನ್ನ ತೆರೆಯುವುದಾದರೂ ಹೇಗೆ. ಕೈಯಲ್ಲಿ ನೂಕಲಾಗಲ್ಲ, ಕಾಲಿನಲ್ಲಿ ಒದೆಯೋಕೆ ಆಗಲ್ಲ. ನನ್ನ ಕಣ್ಣಿನೊಳಗೆ ರಕ್ತ ಇಂಗುತ್ತಿದೆ. ಉಗುರಿನ ತುದಿಯಿಂದ ಆರಂಭಿಸಿ ದೇಹದ ಎಲ್ಲಾ ಭಾಗದಲ್ಲೂ ಮರಗಟ್ಟಿದಂತೆ ಅನುಭವ ಉಂಟಾಗುತ್ತಿದೆ. ಕಣ್ಣುಗುಡ್ಡೆ ದೊಡ್ಡದಾಗುತ್ತಿದೆ.
ಕೆಂಪಗಿನ ನರಗಳು ಕಣ್ಣೊಳಗೆ ಎದ್ದುಕಾಣುತ್ತಿವೆ. ಕಿವಿಯೊಳಗೆ ಯಾರೋ ಬಂದು ಅಡ್ಡ ಕೂತಂತೆ ಅನುಭವವಾಗುತ್ತಿದೆ. ಎದೆಯ ಮೇಲೆ ದೊಡ್ಡ ಬಂಡೆಯನ್ನು ಒತ್ತಿ ಇಟ್ಟಿದ್ದಾರೆ. ಉರುಳಾಡುತ್ತಿದ್ದೇನೆ. ಮಲಗಿರುವ ಮಂಚ ಚುಚ್ಚಿದಂತಾಗುತ್ತಿದೆ. ಬೇಡೋಣವೆಂದರೆ ಬಾಯಿ ಮಾತನಾಡಲು ಅನುಮತಿ ನೀಡುತ್ತಿಲ್ಲ.
ಕರೆಯೋಕೆ ಯಾರು ಇಲ್ಲ. ಮೊನ್ನೆ ತಾನೆ ಕಟ್ಟಿಸಿದ ಮನೆ, ತೆಗೆದಿಟ್ಟಿರುವ ಹಣ ಎಲ್ಲವೂ ಹಾಗೇ ಉಳಿಯುತ್ತದೆ.ಅನುಭವಿಸೋಕೆ ನಾನಿರುತ್ತೇನೋ ಇಲ್ಲವೋ ಅನ್ನೋ ಭಯ ಉಂಟಾಗಿದೆ. ಅವತ್ತು ಅಮ್ಮ ಹೇಳಿದ್ರು” ಮನೆಯಲ್ಲಿ ಇರು, ಸ್ವಲ್ಪ ಸಮಯ ಅಮೇಲೆ ಹೊರಗೆ ಹೋಗೋದು ಇದ್ದೇ ಇದೆ ಅಲ್ವಾ?.
ಹಾಗೇನೂ ಆಗಲ್ಲ. ನಾನು ಗಟ್ಟಿ ಇದ್ದೇನೆ. ನಮ್ಮಂಥವರ ಬಳಿಗೆ ಏನೂ ಬರೋದೇ ಇಲ್ಲ.” ಎಂದು ತಿರುಗಾಡಿದೆ. ಈಗ ಪರಿಸ್ಥಿತಿ ಕೈಮೀರಿದೆ. ಅಪ್ಪ ಇನ್ನೊಂದು ಐಸಿಯು ಒಳಗಿದ್ದಾರೆ. ಮನೆಯ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಮಗಾ ಕಾಯ್ತಾ ಇರಬಹುದು… ಎಲ್ಲದಕ್ಕೂ ನಾನೇ ಕಾರಣ .ಈಗ ಬೇಕಿರುವುದು ಸ್ವಲ್ಪ ಗಾಳಿ ಅದೇ ಸಿಗ್ತಿಲ್ಲ…. ಮುಂದೇನು …ಯಾರದು ಹೆಜ್ಜೆ ಸಪ್ಪಳ ಹತ್ತಿ…….
ಧೀರಜ್ ಬೆಳ್ಳಾರೆ