LATEST NEWS
ದಿನಕ್ಕೊಂದು ಕಥೆ- ಆತನೊಬ್ಬ
ಆತನೊಬ್ಬ
“ಉಮ್ಮಳಿಸಿ ಬರುತ್ತಿರುವ ದುಃಖವನ್ನು ತುಟಿ ಒತ್ತಿ ತಡೆಯಬಹುದು. ಆದರೆ ಮನಸ್ಸು ಆಗಾಗ ಎಚ್ಚರಿಸುವ ಭಯ, ಅಲ್ಲಲ್ಲಿ ಕಾಣುವ ದೃಶ್ಯಗಳು ಒಳಗೊಂದು ಕಂಪನವನ್ನು ಸೃಷ್ಟಿಸುತ್ತಿದೆ. ಇ ಸಾಮಾನ್ಯವೆಂದುಕೊಂಡಿದ್ದ ಕಾಯಿಲೆಯೊಂದು ಮಾರಣಾಂತಿಕವಾಗುತ್ತಿದೆ.
ಕಣ್ಣೆದುರು ಉಸಿರು ನಿಲ್ಲಿಸುವ ಜೀವಗಳು, ಉಸಿರಿಗಾಗಿ ಒದ್ದಾಡುವ ನತದೃಷ್ಟ ಆತ್ಮಗಳು, ದೊಡ್ಡವರು, ಸಣ್ಣವರಿಗೆ ನಡುಕ ಹುಟ್ಟಿಸುವ ರೋಗವಿದು. ಪ್ರತಿಯೊಂದು ಖಾಲಿಯಾಗುತ್ತಿದೆ. ಹಾಸಿಗೆಗಳಿಲ್ಲ, ಮದ್ದಿಲ್ಲ, ಶವಗಾರದಲ್ಲಿ ಜಾಗವಿಲ್ಲ, ಹೀಗೆ ಇಲ್ಲಗಳ ನಡುವೆ ಇರುವಿಕೆಯನ್ನು ಹುಡುಕೋಕಾಗ್ತಿಲ್ಲ.
ಇಲ್ಲಿ ದುಃಖವಿದೆ ,ಕಣ್ಣೀರು ಹೆಪ್ಪುಗಟ್ಟಿದೆ. ಚಿರನಿದ್ರೆಗೆ ಸರತಿ ಸಾಲುಗಳು ಇಂತಿವೆ. ಇಲ್ಲ ಇನ್ನು ಅಜಾಗರೂಕತೆ ಸಲ್ಲ. ಸಣ್ಣ ರೋಗವೊಂದು ಏನು ಹೇಳು ಹೊರಟಿದೆ. ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಒಂದಿಷ್ಟು ತಟಸ್ಥರಾಗಬೇಕು ,ಒಬ್ಬಂಟಿಯಾಗಬೇಕು. ಜವಾಬ್ದಾರಿ ಹೆಚ್ಚಾಗಬೇಕು . ನನಗೆ ಬಂದಿಲ್ಲವಲ್ಲ ಅನ್ನೋ ಉಡಾಫೆ ಬೇಡ.
ದುಡ್ಡಿರುವವರು ಆರು,ಮೂರರ ಗುಂಡಿಯೊಳಗೆ ಮಲಗಿದ್ದಾರೆ.ನಮ್ಮ ಗತಿ ಏನು?. ಒಳಗಿರೋಣ. ನಮ್ಮೊಳಗನ್ನು ಶುದ್ಧವಾಗಿಟ್ಟುಕೊಳ್ಳೋಣ.ನಾ ಹೇಳಲಿಲ್ಲವೆಂದು ಹೇಳಬೇಡಿ…ಕೇಳಿ…” ಆತ ಗಂಟಲು ಅರಚುತ್ತಿದ್ದ ಊರ ಮಧ್ಯದ ಅರಳಿ ಮರದ ಬುಡದಲ್ಲಿ. ಕೇಳುವ ಕಿವಿಗಳು ಕಮ್ಮಿಯಾಗಿದ್ದವು. ಪ್ರತಿ ಊರು ಸುತ್ತುತ್ತಿದ್ದ. ಅನುಭವದ ಮಾತಿನಲ್ಲಿ ನಿಜವಿತ್ತು. ಕಣ್ಣು ಬೇಡುತ್ತಿತ್ತು ….
ಧೀರಜ್ ಬೆಳ್ಳಾರೆ