LATEST NEWS
ದಿನಕ್ಕೊಂದು ಕಥೆ- ನಾನೆಂಬುವವನ ಮಾತು

ನಾನೆಂಬುವವನ ಮಾತು
ನೀವ್ ಅಂದುಕೊಂಡಿರುವ ಹಾಗೆ ನಾನು ಸಾಮಾನ್ಯನಲ್ಲ. ಬಹಳ ಎತ್ತರದಲ್ಲಿ ಇದ್ದೇನೆ. ನಿಮಗೆ ಅಷ್ಟು ಸುಲಭವಾಗಿ ನನ್ನ ತಲುಪಲಾಗದು. ನನ್ನೊಂದಿಗೆ ಸೇರುವುದರಿಂದ ನಿಮಗೆ ಹೆಸರೂ ಪ್ರಖ್ಯಾತಿ, ಸಿಗಬಹುದು. ಈಗಾಗಲೇ ಇಂತಹ ಹಂತವನ್ನು ತಲುಪಿದ್ದೇನೆ. ನನ್ನ ಕಥೆಗಳು, ದಿನಕ್ಕೊಂದು ಆಲೋಚನೆ, ಜನ ಮನಸೂರೆಗೊಳ್ಳುತ್ತಿದೆ.
ಅಭಿಮಾನದ ನಾಳೆಗಳು ಹೆಚ್ಚುತ್ತಿವೆ . ಸಾಧಕನಾಗುತ್ತಿದ್ದೇನೆ .ನಾನು ಕನ್ನಡ ಸಾಹಿತ್ಯಕ್ಕೆ ನನ್ನಲ್ಲಾದ ಕೊಡುಗೆ ನೀಡುತ್ತಿದ್ದೇನೆ.” ಗೆಳೆಯ ಮಾತು ಸಾಕು, ಸ್ವಲ್ಪ ಇಲ್ಲಿ ಕೇಳು?” ” ಇಲ್ಲಿ ಯಾರು ಕಾಣುತ್ತಿಲ್ಲವಲ್ಲ” ನಿನಗೆ ಕಾಣುವುದು ಬೇಡ ಕೇಳಿದರೆ ಸಾಕು .
ಸರಿ” ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನೋ ಒಂದು ಮಾತಿದೆ. ಆ ಮಾತನ್ನಾಡಿಸಿದನು ಭಗವಂತ.

ಆತನು ಕೊಟ್ಟ ಬದುಕಿದು. ಹೊಸ ಆಲೋಚನೆ , ದಿನಕ್ಕೊಂದು ಕತೆ,ನಿನ್ನ ಮನಸ್ಸು ಗೆಲ್ಲಲು ಹೊಸ ಆಲೋಚನೆ, ನಿನ್ನ ಉಚ್ಚ್ವಾಸ-ನಿಚ್ಚ್ವಾಸಗಳ ಗಾಳಿಗೆ,ಹೊಟ್ಟೆ ಸೇರುತ್ತಿರುವ ಅನ್ನಕ್ಕೆ, ಬಾಯಾರಿಕೆ ನೀಗಿಸುವ ನೀರಿಗೆ ,ಪ್ರೀತಿಸುವ ಜೀವಗಳಿಗೆ ,ಪ್ರೋತ್ಸಾಹಿಸುವ ಮನಸ್ಸುಗಳಿಗೆ, ಪ್ರತಿಯೊಂದಕ್ಕೂ ನಿರಾಕಾರ ಮಹಿಮನ ಆಶೀರ್ವಾದ ಬೇಕು.
ಅಖಿಲಾಂಡದಲ್ಲಿ ನಾವೊಂದು ತುಣುಕುಗಳು. ನೀನು ನಾನೆಂಬ, ಜಾಲದೊಳಗೆ ಸಿಲುಕಿ ಉಸಿರುಗಟ್ಟಿಸಿ ಸಾಯುವ ಪರಿಸ್ಥಿತಿ ಬರಬಹುದು ಆಗ ಈ ಹಾಡನ್ನೊಮ್ಮೆ ಕೇಳು.
“ಅವನ ನಿಯಮದಂತೆ ಮೀರಿ ಏನು ಸಾಗದು”,” ಅದೇನೇ ಆಗಲಿ ಅವನೇ ಕಾರಣ .ಇಂದಿನಿಂದ ನನಗೆ
ನನ್ನೊಳಗೆ ಚೈತನ್ಯ ಶಕ್ತಿ ಹುಟ್ಟಿಸಿದ ಕಥೆಯನ್ನು ನಿಮ್ಮ ಮುಂದಿಟ್ಟಿದ್ದೇನೆ , ನಾನು ನಿಮ್ಮೊಳಗೊಬ್ಬ
ಧೀರಜ್ ಬೆಳ್ಳಾರೆ