LATEST NEWS
ದಿನಕ್ಕೊಂದು ಕಥೆ- ಕನಸು ಮಾತಾಡಿತು
ಕನಸು ಮಾತಾಡಿತು
ಹಲೋ.., ನಾನು ಮೌನವಾಗಿದ್ದಾನೆ ಅಂದುಕೊಂಡು ನಿನಗಿಷ್ಟ ಬಂದ ಹಾಗೆ ಆಟ ಆಡಿಸುತ್ತಾ ಇದ್ದೀಯಾ. ಓಡಾಡ್ತಾ ಇರೋದು ಸಾಕು. ನಿನ್ನಲಿ ಒಂದಿಷ್ಟು ಮಾತನಾಡಬೇಕು?.” ನನ್ನ ಹೆಸರು ಡ್ರೀಮ್!. ಅದೇ ನೀನು ಕನಸು ಅಂತ ಕರಿತಿಯಲ್ಲ ಅವನೇ ನಾನು. ನಿನ್ನೊಳಗೆ ನನ್ನನ್ನು ತುಂಬಿಸಿಕೊಂಡು ಓಡಾಡುತ್ತೀಯಾ ಸರಿ.
ಅದು ನಿನ್ನಿಷ್ಟ. ಆದರೆ ನಾನು ಮೊಟ್ಟೆಯೊಡೆದು ಚಿಗುರಿ ನನಸಾಗಿ ಬದಲಾಗಿ ದೊಡ್ಡ ಮರವಾಗಿ ನಿಲ್ಲಬೇಕು. ನಾನು ರೂಪಾಂತರ ಹೊಂದಲು ನೀನೇನು ಮಾಡ್ತಾ ಇದ್ದೀಯ. ಅಂದರೆ ನಿನ್ನ ಪ್ರಯತ್ನವೇನಿದೆ. ನನ್ನನ್ನ ನಿನ್ನೊಳಗೆ ಬಂದಿಯಾಗಿಸಲು ನಿನಗೇನು ಅರ್ಹತೆ ಇದೆ?.
ನೀನು ಅರ್ಹತೆ ಸಂಪಾದಿಸಿ ನನ್ನನ್ನ ನಿನ್ನ ಆಪ್ತನನ್ನಾಗಿ ಮಾಡಿಕೋ .ನೆಲದ ಮೇಲುರುಳಿ ನಿದ್ದೆಗೆ ಜಾರಿದಾಗ ಎಚ್ಚರವಾಗಿರೋನು ನಾನಲ್ಲ? ತಿಳಿಯಿತಾ ..ದಿನವೂ ನಿನ್ನನ್ನು ಪ್ರೋತ್ಸಾಹಿಸೋನು. ನನ್ನಂಥವರನ್ನ ನಿನ್ನೊಳಗೆ ತುಂಬಿಸುಕೋ ತಪ್ಪೇನಲ್ಲ ,ಅದರಲ್ಲಿ ಕೆಲವನ್ನಾದರೂ ಪೂರೈಸುತ್ತ ಸಾಗು.
ಒಂದಷ್ಟು ನಮ್ಮ ರಾಶಿಗಳನ್ನು ಕಡಿಮೆಗೊಳಿಸು ಸರಿನಾ. ಇಲ್ಲಿ ಉಸಿರುಗಟ್ಟುತ್ತದೆ, ಅವಕಾಶದ ಆಕಾಶದೊಳಗೆ ನನ್ನ ಬಿಡು. ಅವರಿವರಲ್ಲಿ ಮಾತಿನೊಳಗೆ ನನ್ನ ತಂದು ನಿಲ್ಲಿಸುವ ಬದಲು ಕಾರ್ಯದೊಳಗೆ ಕೊಂಡೊಯ್ದು ನನಗೊಂದು ಮೂರ್ತರೂಪ ನೀಡು. ನಿನ್ನನ್ನ ನಂಬಿದ್ದೇನೆ, ಕೈ ಬಿಡಬೇಡ. ನನ್ನ ರೂಪದಿಂದ ನನಸಿನ ರೂಪ ನೀಡೋರು ಕೆಲವರು. ನೀನು ಅದರಲ್ಲಿ ಒಬ್ಬನಾಗುತ್ತೀಯ ಎಂದು ನಂಬಿದ್ದೇನೆ ?ನಿಜ ಅಲ್ವಾ ….
ಧೀರಜ್ ಬೆಳ್ಳಾರೆ