Connect with us

    LATEST NEWS

    ಪಾರ್ಟಿ ಮಾಡಲು ಹೋಗಿ ಹನಿಟ್ರ್ಯಾಪ್ – ಇಬ್ಬರು ಆರೆಸ್ಟ್

    ಮಂಗಳೂರು ಜುಲೈ 28: ಸ್ನೇಹಿತರ ಮನೆಯಲ್ಲಿ ಪಾರ್ಟಿ ಮಾಡಲು ಹೋಗಿ ಹನಿಟ್ರ್ಯಾಪ್ ಗೆ ಒಳಗಾದ ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಝೀನ್ ಸಿ.ಎಂ ಹಾಗೂ ಹತೀಜಮ್ಮ ಎಂದು ಗುರುತಿಸಲಾಗಿದೆ.


    ಉಳ್ಳಾಲ ಠಾಣಾ ವ್ಯಾಪ್ತಿಯ ಇನ್ ಲ್ಯಾಂಡ್ ಇಂಪಲ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿಗಳು ಜುಲೈ 19ರಂದು ಪರಿಚಯದವರೊಬ್ಬರ ಮನೆಯಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಜ್ಯೂಸ್ ಜತೆ ಅಮಲು ಪದಾರ್ಥ ಹಾಕಿ ಕೊಟ್ಟಿದ್ದಾರೆ. ಅದನ್ನು ಕುಡಿದ ಮನೆಯ ಮಾಲೀಕ ಮೂರ್ಛೆ ಹೋಗಿದ್ದರು. ಎಚ್ಚರಗೊಂಡಾಗ ವಿವಸ್ತ್ರಗೊಂಡಿದ್ದು, ಆರೋಪಿಗಳು ಮನೆಯಿಂದ 2 ಲಕ್ಷ 12 ಸಾವಿರ ಕಳವು ಮಾಡಿದ್ದಾರೆ.


    ಕಳವು ನಡೆದ ಬಗ್ಗೆ ಮರುದಿನ ಬೆಳಿಗ್ಗೆ ಅರಿವಿಗೆ ಬಂದು ಮನೆಯ ಮಾಲೀಕ ಆರೋಪಿ ಅಝೀನ್ ಮನೆಗೆ ತೆರಳಿ ಪೊಲೀಸ್ ಠಾಣೆಗೆ ನಿಮ್ಮ ಕುರಿತು ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಪೊಲೀಸ್ ಕಂಪ್ಲೇಟ್ ಮಾಡಬೇಡಿ ನಾಳೆ ನಿಮ್ಮ ಹಣ ಹಿಂತಿರುಗಿಸುತ್ತೇನೆ ಅಂತ ಮನೆ ಮಾಲೀಕನನ್ನು ನಂಬಿಸಿ ನಂತರ ಮನೆಗೆ ಬಂದ ಆರೋಪಿಗಳು ಅವರ ಮೊಬೈಲ್‌ನಲ್ಲಿದ್ದ ಮನೆ ಮಾಲೀಕನ ನಗ್ನ ಫೋಟೊ, ವಿಡಿಯೋ ತೋರಿಸಿ ತನ್ನಲ್ಲಿ ಹಣ ಕೇಳಿದರೆ ಅಥವಾ ಪೊಲೀಸ್ ಕಂಪ್ಲೇಟ್ ಮಾಡಿದರೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ. ಜೊತೆಗೆ ಸ್ವತಃ ನೀನು ನನ್ನ ತಂಗಿಯ ಬಲತ್ಕಾರಕ್ಕೆ ಪ್ರಯತ್ನಿಸಿರುವುದಾಗಿಯು ತಂಗಿಯ ಕೈಯಿಂದ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾನೆ. ಹೀಗಾಗಿ ಮನೆ ಮಾಲೀಕ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply