Connect with us

    LATEST NEWS

    ದಿನಕ್ಕೊಂದು ಕಥೆ- ಮಾನವೀಯತೆ

    ಮಾನವೀಯತೆ

    ಬಂಧನ ಗೋಡೆಯದ್ದಲ್ಲ. ರೋಗದ್ದು. ಗೋಡೆಯನ್ನು ಒಡೆಯಬಹುದು, ಬಾಗಿಲನ್ನು ನೂಕಬಹುದು ಆದರೆ ರೋಗದ ಲಕ್ಷಣಗಳ ಇರುವ ವ್ಯಕ್ತಿಯನ್ನು ಹತ್ತಿರ ಸೇರಿಸುವವರು ಯಾರು?. ಆಲಂದಹಳ್ಳಿಗೆ ರೋಗ ತಲುಪಿತು. ಇದು ಹೆಸರಿಗೆ ಮಾತ್ರ ಹಳ್ಳಿ ಅದರ ಲಕ್ಷಣವನ್ನು ಕಳೆದುಕೊಂಡು ದಶಕಗಳೇ ಆಗಿದೆ.

    ಪರವೂರಿನ ಕೊರೋನಾ ತೀವ್ರಗತಿಯಲ್ಲಿ ಊರಿಗೂ ತಲುಪಿದೆ. ಹಿರಿಯಾಲದ ಹಿಂದಿನ ಮನೆ ಸುಶೀಲನದ್ದು. ಗಂಡ ರಮೇಶನೊಂದಿಗೆ ಮಧ್ಯಮವರ್ಗದ ಬದುಕು ಸಾಗಿಸುತ್ತಿದ್ದವರು. ರೋಗಕ್ಕೆ ಜಾತಿ ಕುಲಗೋತ್ರಗಳ ಪರಿಚಯವಿಲ್ಲ. ಸುಶೀಲನ ಮನೆಗೂ ತಟ್ಟಿತು. ಸರಕಾರ ಮನೆಯನ್ನು ದಿಗ್ಬಂಧನ ಮಾಡಿತು.

     

    ರೋಗ ಹೊರಗಡೆ ಹೋಗಬಾರದೆಂಬ ಎಚ್ಚರಿಕೆ ಒಪ್ಪಬೇಕಾದ್ದೇ. ಒಳಗಿರುವ ಜೀವಗಳಿಗೆ ಆಹಾರ ತಲುಪುವುದು ಹೇಗೆ. ಸುಶೀಲಾ ತನ್ನ ಗೆಳತಿ ರಮ್ಯಳಿಗೆ ಕರೆಯಾನಿಸಿದಳು. ಸಹಾಯ ಬೇಡಿದಳು. ಇಲ್ಲ ಎನ್ನುವ ಉತ್ತರ ಇಲ್ಲದ್ದರಿಂದ ಸತತ 15 ದಿನಗಳ ಕಾಲವೂ ಈ ಮನೆಯಿಂದ ಆ ಮನೆಗೆ ಆಹಾರ ಸರಬರಾಜು ಆಯಿತು . ರಮ್ಯನ ಗಂಡ ಜವಾಬ್ದಾರಿ ತೆಗೆದುಕೊಂಡ .ಗುರುತು ಪರಿಚಯವಿಲ್ಲ ಹೆಂಡತಿಯ ಗೆಳತಿಯನ್ನುವ ವಿಚಾರವಷ್ಟೇ ಗೊತ್ತು.

    ಮುಂಜಾನೆ, ಮಧ್ಯಾಹ್ನ ,ರಾತ್ರಿ ,ಬುತ್ತಿ ಕೊಟ್ಟು ಬರುತ್ತಿದ್ದ. ರೋಗ ಮಾಯವಾಯಿತು ಸಂಬಂಧ ಬೆಳೆಯಿತು. ಮಾನವೀಯತೆಯ ಮುಖವೊಂದು ನಗುತ್ತಿತ್ತು. ಪ್ರತಿಫಲವಿಲ್ಲದ ಮನುಷ್ಯ ಧರ್ಮ ಜಾಗೃತವಾಗಿತ್ತು. “ಸಹಾಯಕ್ಕೆ ಪರಿಚಯ ಯಾಕೆ ಸಾರ್” ಅವನ ಮಾತು ಎದೆನ್ನೊಮ್ಮೆ ತಟ್ಟಿ ಎಬ್ಬಿಸಿತು .ಊರಿನ ಹಿರಿಯಾಲದ ಮರ ಬೇರನ್ನು ಇನ್ನೂ ಆಳಕ್ಕೆ ಇಳಿಸಿ ಇನ್ನೊಂದಷ್ಟು ವರ್ಷ ಬದುಕುವ ಯೋಜನೆಯನ್ನು ಮಾಡಿತು….?

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *