LATEST NEWS
ದಿನಕ್ಕೊಂದು ಕಥೆ- ದೃಷ್ಟಿ

ದೃಷ್ಟಿ
ನನ್ನ ವಿಷಯದಲ್ಲಿ ಈ ಕಚ್ಚಾಟ ಏಕೆ ಗೊತ್ತಾಗುತ್ತಿಲ್ಲ?. ನಾನು ಎಲ್ಲಿದ್ದರೂ ಬದುಕುತ್ತಿದ್ದೆ. ನಾನು ಯಾರು ಅಂತ ನಾ ?. ಅದೇ ಕೆಲವರು ಮನೆ ಹೊರಗಡೆ, ಕೆಲವರು ಒಳಗಡೆ ಸಾಕುತ್ತಾರೆ. ಇಲ್ಲದಿದ್ದರೆ ಬೀದಿಯಲ್ಲಿಯೇ ಬದುಕುತಿರುತ್ತೇನೆ. ಆ ಏನು ನಾಯಿಯ?, ಸ್ವಲ್ಪ ಗೌರವ ಕೊಟ್ಟು ಶ್ವಾನ ಅಂತ ಕರೆಯಿರಿ.
Give respect and take respect. ಇವತ್ತಿನ ಘಟನೆ ಕೇಳಿ. ನನ್ನನ್ನು 15 ದಿನದಿಂದ ಸಾಕುತ್ತಿದ್ದವನ ಜೊತೆ ಬೈಕಿನಲ್ಲಿ ಸುತ್ತಾಡೋಕೆ ಹೊರಟಿದ್ದೆ. ಗಾಳಿ ಮೈಯನ್ನು ಸವರುತ್ತಿತ್ತು. ಅಲ್ಲೊಂದು ಕಡೆ ನಿಂಲ್ಲಿಸಿದಾಗ ಅವಳು ಬಂದು ಜಗಳ ಆರಂಭಿಸಿದಳು.” ಏಯ್ ನಾಯಿ ಕಳ್ಳ ,ನನ್ನ ಪ್ರೀತಿಯ ನಾಯಿ!”.

“ಮರ್ಯಾದೆ ಕೊಡಿ, ಇದು ನಾನು ಖರೀದಿಸಿದ್ದು””ಇಲ್ಲ ಇದು ನಂದೇ” “ಇದು ನಂದೇ” ಮಾತುಕತೆ ಮುಂದುವರೆದಿತ್ತು. ಅವಳು ಇದ್ದಾಳಲ್ಲಾ ನನ್ನ ಸಣ್ಣಂದಿನಿಂದ ಮುದ್ದಿನಿಂದ ಸಾಕಿದವಳು. ಅವರ ಮನೆಯಿಂದ ಅವತ್ತೊಂದಿನ ಮಧ್ಯಾಹ್ನ ಇನ್ಯಾರೋ ಕದ್ದು ನನ್ನನ್ನು ಇವನಿಗೆ ಮಾರಿದ್ದರು. ಇವನೋ ಪ್ರೀತಿಯಿಂದಲೇ ಸಾಕಿದ್ದ.
ಅವಳ ಮುಂದೆ ಕಳ್ಳನಾದವ ಇವನೇ ?. ನಾನು ಹೇಳೋಣ ಅಂದರೆ ನನಗೆ ನಿಮ್ಮ ಭಾಷೆ ಬರುತ್ತಾ?. ಬಂದ ಪೋಲೀಸಿನವನು ಅವನ ಮಾತನ್ನು ಕೇಳುತ್ತಿಲ್ಲ. ನಿಮ್ಮ ಮನುಷ್ಯರಲ್ಲಿ ಹುಡುಗಿಯರ ಮಾತಿಗೆ ಬೆಲೆ ಜಾಸ್ತಿ?, ಹುಡುಗರನ್ನು ನಂಬೋದಿಲ್ಲ ಅಲ್ಲವಾ?. ಬೀದಿಯಲ್ಲಿ ಇರುವ ನಮ್ಮವರಿಗಿಂತ ಕಡೆಯಾಗಿ ಎಳೆದುಕೊಂಡು ಹೋದರು.ಅಯ್ಯೋ ವಿಧಿಯೇ ಅವನಿಗೂ ಒಂದು ಬದುಕಿದೆ! ಯೋಚಿಸಿ ನಿರ್ಧರಿಸುವುದಲ್ಲವಾ!. ಇಲ್ಲದಿದ್ದರೆ ಜನ ಸಾವಿರ ಮಾತಾಡ್ತಾರೆ “ಯಾರ ಬೈಕ್ ಅದು?” “ನಾಯಿ ಕಳ್ಳನದು” “ಇವನ್ಯಾರ ಮಗ” “ಅದೇ….. ಇದು ಮುಂದುವರಿಯುತ್ತಲೇ ಇರುತ್ತದೆ ಅಲ್ವಾ ?
ಧೀರಜ್ ಬೆಳ್ಳಾರೆ