Connect with us

LATEST NEWS

ದಿನಕ್ಕೊಂದು ಕಥೆ- ಅವಸ್ಥೆ

ಅವಸ್ಥೆ

ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು .ಊರ ದ್ವಾರದಿಂದ ಗಮನಿಸೋಣವೆಂದು ಬಸ್ ನಿಲ್ದಾಣದಿಂದ ಒಳ‌ಹೊಕ್ಕರು.

ರಸ್ತೆ ಕಾಣುತ್ತಿಲ್ಲ ಬರಿಯ ಕಲ್ಲುಗಳೇ ಉರುಳಾಡುತಿವೆ. ಮಳೆಗಾಲದಲ್ಲಿ ಗುಡ್ಡದ ಕುಸಿತದಿಂದ ಉಂಟಾದದ್ದು ಎನ್ನೋದು ನಾರದರ ತಿಳುವಳಿಕೆಗೆ ಬಂತು. ಇದರ ಬದಲಾವಣೆ ಸಾಧ್ಯವೇ ಅನ್ನೋದನ್ನ ಊರ ಜನರು ಚಿಂತಿಸಿದ್ದಾರೆ ಅನ್ನೋದು ದಿವ್ಯ ದೃಷ್ಟಿ ಯಿಂದ ನಾರದರ ಗಮನಕ್ಕೆ‌ಬಂತು. ಊರವರಿಗೆ ರಸ್ತೆ ಸರಿಯಾಗಬೇಕು ಎಂಬ ಹಂಬಲವಿದ್ದರೂ ನಾಯಕನಿಗಿರಬೇಕಲ್ಲಾ.

ಹಲವು ಲಕ್ಷಗಳು ಮಂಜೂರಾಗಿದ್ದರೂ ಅದರಲ್ಲೆಷ್ಟು ಮನೆಗೊಯ್ಯುವುದು ಅನ್ನೋ ಯೋಚನೆ ನಾಯಕನದ್ದು. ಇದಕ್ಕೆ ಪೂರಕವಾಗಿ ಕೆಲವು ಜ್ಞಾನವಂತರ ಮಾತಿನ ಪ್ರಕಾರ ಬಂದ ಹಣದಲ್ಲಿ ಮೂರನೇ ಒಂದು ಭಾಗದಷ್ಟು ರಸ್ತೆಗೆ‌ ಉಳಿದ್ದೆಲ್ಲಾ‌ ಚರಂಡಿ ನಿರ್ಮಾಣಕ್ಕೆ. ನೀರು ಹರಿಯದಿರೋ ಜಾಗದಲ್ಲಿ ಚರಂಡಿ ಕಟ್ಟಿ ಹಣವನ್ನ ಮನೆಗೆ ಹರಿಸುವ ಯೋಜನೆ ಅದ್ಭುತವಾಗಿತ್ತು. ನಾರದರಿಗೆ ಈ ಆಲೋಚನೆಗಳೇ ಬೇಸರ ಹುಟ್ಟಿಸಿ ಮತ್ತೆ ವೈಕುಂಠಕ್ಕೆ ತೆರಳುವ ಮೋಡಕ್ಕೆ ಕಾಯುತ್ತಾ ಕುಳಿತರು…

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *