LATEST NEWS
ದಿನಕ್ಕೊಂದು ಕಥೆ- ಮಿಸ್ಸಿಂಗ್ ಕೇಸ್

ಮಿಸ್ಸಿಂಗ್ ಕೇಸ್
ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ .ಪಕ್ಕದಲ್ಲಿ ಆತಂಕ ,ಇನ್ನೊಂದೆಡೆ ಭರವಸೆ ನೀಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು ಬರಮಾಡಿಕೊಳ್ಳುತ್ತಿದೆ.
ಮನೆಯ ಹಿರಿಯ ಜೀವ ಕನ್ನಡ ಪತ್ರಿಕೆಗೆ ಬೇಕಾದ ವಿಚಾರ ಧಾರೆಗಳ ತಿಳಿಸಿತು. ಕನ್ನಡ ದಿನಪತ್ರಿಕೆಗಳಲ್ಲಿ ಸುದ್ದಿ ಅಕ್ಷರಗಳ ನಿಜವೃತ್ತಾಂತವ ಗೋಡೆಯ ನಡುವೆ. ಚಲಿಸುತ್ತಿದೆ ಅಮ್ಮ ಇಲ್ಲದ ಮನೆ ತಂದೆ ಮಗಳು ಒಬ್ಬರಿಗೊಬ್ಬರು ಆತ್ಮೀಯರಾಗಿರುವ ಜೀವ ಆ ದಿನದ ಜೋರು ಗುಡುಗಿಗೆ ಮನೆಯ ಮುಂದಿನ ತೆಂಗಿನಮರಕ್ಕೆ ಸಿಡಿಲು ಬಡಿದು ಅಲ್ಲಿ ಬೆಂಕಿಯನ್ನು ಕೆನ್ನಾಲಿಗೆ ಕರಗಿದ ಹಾಗೆ ಇಲ್ಲಿ ಅವಳ ಮಾಸದ ನೆನಪು ಕರಗಲು ಸಾಧ್ಯವಾಗುತ್ತಿಲ್ಲ?

ಒ ಪೋಲಿಸ್ ಮೆಟ್ಟಲು ಸವೆದಿದೆ ,ಪೇಪರ್ ಟಿವಿಗಳು ಸಣ್ಣ ಸುದ್ದಿಯಾಗಿ ಮುಚ್ಚಿಹೋಗಿದೆ. ಇಲ್ಲಿ ಮನೆಯವರು ಕಳೆದುಕೊಂಡಿರುವುದು ಬೆಲೆಕಟ್ಟಲಾಗದ ವಜ್ರ .ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸ್ ಸ್ಟೇಷನ್ ನ ಮಿಸ್ಸಿಂಗ್ ಕೇಸು ಗಳ ನಡುವಿನ ಫೈಲಿನೊಳಗ ಅವಳಪೈಲು ಈಗಲೂ ಕೂಡ ದೂಳು ತಿನ್ನಲು ತಯಾರಾಗಿ ಸೇರಿಹೋಯಿತು
ಧೀರಜ್ ಬೆಳ್ಳಾರೆ