Connect with us

BELTHANGADI

ಧರ್ಮಸ್ಥಳ ಪ್ರಕರಣ – ಮುಂದುವರೆದ ಶವ ಶೋಧ ಕಾರ್ಯ

ಬೆಳ್ತಂಗಡಿ ಅಗಸ್ಟ್ 02: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ. ಇಂದು 9ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ.


ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸುತ್ತಲೂ ಹಲವೆಡೆ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾಕ್ಷಿ ದೂರುದಾರ ನೀಡಿದ ಸೂಚನೆಯಂತೆ ಏಳು ಮತ್ತು ಎಂಟನೇ ಸ್ಥಳಗಳಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಗೆದು ಪರಿಶೀಲನೆ ನಡೆಸಿದರೂ ಯಾವುದೇ ಅವಶೇಷಗಳು ಲಭಿಸಿಲ್ಲ. ಏಳು ಮತ್ತು ಎಂಟನೆಯ ಸ್ಥಳಗಳು ನದಿ ಬದಿಯಲ್ಲಿಯೇ ಇದ್ದು ಮರಳು ಮಿಶ್ರಿತ ಮಣ್ಣಾದ ಕಾರಣ ಸುಲಭವಾಗಿ ಅಗೆದು ಕಾರ್ಯಾಚರಣೆ ನಡೆಸಲಾಯಿತು. ಶುಕ್ರವಾರವೂ ಕಾರ್ಯಾಚರಣೆ ವೀಕ್ಷಿಸಲು ಜನಜಂಗುಳಿ ಸೇರಿತ್ತು. ಅನಾಮಿಕ ಗುರುತಿಸಿದ 13 ಜಾಗಗಳ ಪೈಕಿ ಈವರೆಗೂ ಒಂದರಿಂದ ಎಂಟರವರೆಗಿನ ಸ್ಥಳಗಳು ನದಿ ಬದಿಯಲ್ಲಿಯೇ ಇವೆ. ಅಗೆದ ಪ್ರದೇಶಗಳಲ್ಲಿ ಕೇವಲ ಆರನೇಯ ಸ್ಥಳದಲ್ಲಿ ಮಾತ್ರ ಒಂದು ಅವಶೇಷ ಪತ್ತೆಯಾಗಿತ್ತು. ಶನಿವಾರ ಅಂದರೆ ಇಂದು ನದಿ ಬದಿಯಿಂದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಇರುವ ಒಂಬತ್ತನೆಯ ಸ್ಥಳದಿಂದ ಅಗೆಯುವ ಕಾರ್ಯ ಆರಂಭವಾಗಲಿದೆ.

ಇದಕ್ಕೂ ಮೊದಲು ಅಗೆಯುವ ಪ್ರಕ್ರಿಯೆ ಹೊರಗೆ ಕಾಣಿಸದಂತೆ ದೂರುದಾರು ಗುರುತಿಸಿರುವ ರಸ್ತೆ ಬದಿಯಲ್ಲೇ ಇರುವ 9, 10 ಮತ್ತು 11ನೇ ಜಾಗಗಳನ್ನು ಹಸಿರು ಪರದೆ ಕಟ್ಟಿ ಮುಚ್ಚಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *