BELTHANGADI
ಆ ಪುಣ್ಯಾತ್ಮರು ನಮಗೆ ಹಿಂಸೆ ಕೊಡದಿದ್ದರೆ ನೀವು ಧರ್ಮಸ್ಥಳಕ್ಕಾಗಿ ಪ್ರಾರ್ಥನೆ ಮಾಡುತ್ತೀರಲಿಲ್ಲ – ಡಾ. ಡಿ ವಿರೇಂದ್ರ ಹೆಗ್ಗಡೆ
ಧರ್ಮಸ್ಥಳ ಅಕ್ಟೋಬರ್ 29: ಇಂತಹ ಅಪವಾದಗಳು ಬಂದಿದ್ದರಿಂದ ಎಲ್ಲರೂ ಕ್ಷೇತ್ರದ ಬಗ್ಗೆ ಪ್ರಾರ್ಥನೆ ಮಾಡುವಂತಾಗಿದ್ದು, ಆ ಪುಣ್ಯಾತ್ಮರು ನಮಗೆ ಹಿಂಸೆ ಕೊಡದಿದ್ದರೆ ನೀವು ಯಾರು ಪ್ರಾರ್ಥನೆ ಮಾಡುತ್ತಿರಲಿಲ್ಲ, ಧರ್ಮಸ್ಥಳಕ್ಕೆ ಯಾಕೆ ಪ್ರಾರ್ಥನೆ ಧರ್ಮಸ್ಥಳ ಶಕ್ತಿ ಅಂದು ಕೊಳ್ಳುತ್ತಿದ್ದೀರಿ ಆದರೆ ಇವತ್ತು ನೀವು ಧರ್ಮಸ್ಥಳಕ್ಕೆ ಆಪತ್ತು ಬಂದಾಗ ಭಕ್ತರು ಕೈಗೊಂಡ ದೀಕ್ಷೆ ಪ್ರಾರ್ಥನೆಯಿಂದಾಗಿ ನಮಗೆ ಬಲ ಬಂದಿದೆ. ನಾನು ಇನ್ನು ನಿಶ್ಚಿಂತನಾಗಿ ಇರುತ್ತೆನೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆ ವೇಳೆ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನ ಮಾಡಬೇಕು ಭಕ್ತರಿಗೆ ತಿಳಿಸಿದರು.
ವಿಷವನ್ನು ಸೇವಿಸುವ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಇದು ದೇವರ ಪರೀಕ್ಷೆ. ಮಳೆ ಬರುತ್ತಿದೆ, ಆದರೆ ಯಾರು ಸಹ ಓಡುತ್ತಿಲ್ಲ, ನಿಂತಿದ್ದೀರಿ. ವೈಯಕ್ತಿಕವಾದ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನೀವೆಲ್ಲರೂ ಸ್ವಾಸ್ಥ್ಯ ಸಂಕಲ್ಪವನ್ನ ಮಾಡಬೇಕು ಎಂದು ಕರೆ ನೀಡಿದರು. ಸೌಜನ್ಯ ಪ್ರಕರಣದ ಆರೋಪಗಳ ಬಗ್ಗೆ ಮೌನ ಮುರಿದ ವೀರೇಂದ್ರ ಹೆಗ್ಗಡೆ ಅವರು, ಯಾವುದೇ ರೀತಿಯ ತನಿಖೆಯಾಗಲಿ. ನಾವೂ ಸಿದ್ಧ. ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ಯಾರೆಲ್ಲಾ ನಮ್ಮ ವಿರುದ್ದ ಮಾತನಾಡುತ್ತಿರುವವರು
ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನ ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು. ನನ್ನ ಕುಟುಂಬದವರು ಅನವಶ್ಯಕವಾಗಿ ಬಂದಂತಹ ಈ ಆರೋಪದಿಂದಾಗಿ ಎಷ್ಟು ನೊಂದುಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತು, ಅದು ಇಂದು ಈ ಮಳೆಯಿಂದಾಗಿ ಕರಡಿ ಹೋಗಲಿ ಎಂದರು.
ಇಬ್ಬರು ಶಿವಗಣಗಳನ್ನು ದೇವರು ನೀಡಿದ್ದಾರೆ. ತಮ್ಮ ಮೇಲೆ ಅಪವಾದ ಬಂದಾಗ ಕುಂದಾಪುರದ ಒಬ್ಬರು ಹಾಗೂ ಬೆಂಗಳೂರಿನ ಒಬ್ಬರು ನಮಗೆ ಬೆಂಬಲವಾಗಿ ನಿಂತು ಸತ್ಯಶೋಧನೆ ಮಾಡಿ ಜನರ ಮುಂದೆ ಮಾಹಿತಿಗಳನ್ನು ಇಟ್ಟಿದ್ದಾರೆ. ಅವರಿಂದಾಗಿ ನಾನು ಇಂದು ಇಲ್ಲಿ ಬರುವ ಹಾಗೆ ಆಯಿತು ಎಂದರು.
ನನಗೆ ಯಾವುದೇ ಹಾನಿಯಾಗಿಲ್ಲ, ಕ್ಷೇತ್ರದಲ್ಲಿ ಯಥಾ ಪ್ರಕಾರ ಧರ್ಮ ನಡಿತಾ ಇದೆ, ಭಕ್ತರು ಬರುತ್ತಿದ್ದಾರೆ. ಸ್ವಾಸ್ಥ್ವ ಸಂಕಲ್ಪ ಮಾಡುವ ಮೂಲಕ ಒಂದು ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಬಿರುಗಾಳಿ ಬಂದಾಗ ನಾಶದ ಜೊತೆಗೆ ಸ್ವಚ್ಛವಾಗುತ್ತದೆ, ನಿಮ್ಮ ಈ ಬಿರುಗಾಳಿ ಮುಂದೆ ಸ್ವಚ್ಛತೆಗೆ ದಾರಿಯಾಗಲಿ. ನಮ್ಮ ಯಾವುದೇ ಹಿಂದೂ ಕ್ಷೇತ್ರಗಳಿಗೂ ಈ ತರದ ಹಾನಿಗಳು ಆಗಬಾರದು. ನಮಗೆ ಯಾವುದೇ ಭಯವಿಲ್ಲ ನನಗೆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಯ ಭಯವಿದೆ. ತಿಳಿದು ತಪ್ಪು ಮಾಡಿದರೆ ಮಾತ್ರ ದೇವರು ಶಿಕ್ಷೆ ನೀಡುತ್ತಾನೆ. ಧರ್ಮ ದೇವತೆಗಳಿಗೆ ಉತ್ತರ ಕೊಡಬೇಕಾದ ನೈತಿಕ ಭಾದ್ಯತೆ ಇದೆ. ನಾವು ತಪ್ಪು ಮಾಡಿಲ್ಲ, ಸತ್ಯದಲ್ಲಿ ನ್ಯಾಯದಲ್ಲಿದ್ದೇವೆ. ಏನು ಬೇಕಾದರೂ ಯಾವ ತನಿಖೆ ಬೇಕಾದರೂ ನಾನು ಸಿದ್ಧ, ನ್ಯಾಯಕ್ಕೆ ತಲೆಬಾಗುತ್ತೇನೆ. ಯಾವ ಸಹಾಯ ಸಂಪತ್ತು ಅಪೇಕ್ಷಿಸದೆ ಬಂದ ಅಪಾರ ಭಕ್ತರಿಗೆ ಧನ್ಯವಾದ ತಿಳಿಸಿದರು. ನಿಮಗೆ ಧನ್ಯವಾದಗಳು