BELTHANGADI
ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಧರ್ಮಸಂಸತ್
ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಧರ್ಮಸಂಸತ್
ಬೆಳ್ತಂಗಡಿ ಸೆಪ್ಟೆಂಬರ್ 2: ದಕ್ಷಿಣ ಭಾರತದ ಅಯೋಧ್ಯೆಯೆಂದೇ ಖ್ಯಾತಿ ಪಡೆದಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಇಂದು ಮತ್ತು ನಾಳೆ ರಾಷ್ಟ್ರೀಯ ಧರ್ಮ ಸಂಸದ್ ನಡೆಯಲಿದೆ.
ಇಂದು ಸಂಜೆ ದೇಶದ ನಾನಾ ಭಾಗಗಳಿಂದ ಆಗಮಿಸಿದ ಸಾಧುಸಂತರ ಬೃಹತ್ ಶೋಭಾಯಾತ್ರೆ ಉಜಿರೆಯಿಂದ ಕನ್ಯಾಡಿ ಕ್ಷೇತ್ರದ ವರೆಗೆ ನಡೆಯಿತು. ನಾಳೆ ಎರಡು ಸಾವಿರಕ್ಕೂ ಮಿಕ್ಕಿದ ಸಂತರ ಸಮಾಗಮ ರಾಷ್ಟ್ರೀಯ ಧರ್ಮ ಸಂಸದ್‌ನಲ್ಲಿ ಭಾಗವಹಿಸಲಿದ್ದಾರೆ.
ದೇಶದ ಉದ್ದಗಲದಿಂದ ವಿವಿಧ ಪರಂಪರೆಯ ಜಗದ್ಗುರುಗಳು, ಮಹಾಮಂಡಲೇಶ್ವರರು, ನಾಗಾ ಸಾಧುಗಳು, ಪವಿತ್ರ ಬಾಬಾಗಳು, ಅಘೋರಿಗಳು, ಆಖಾಡ-ಪರಿಷತ್ ಅಧ್ಯಕ್ಷ ರು ಮೊದಲಾದ ತಪಸ್ವಿಗಳ ಆಗಮಿಸಲಿದ್ದು, ಈಗಾಗಲೇ ಬದರಿ, ಕೇದಾರ, ಗಂಗೋತ್ರಿ, ಚಿತ್ರಕೂಟ, ಉಜ್ಜಯಿನಿ, ನಾಸಿಕ್, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು, ನೇಪಾಳ, ಜಮ್ಮು-ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ವಿವಿಧೆæಡೆಯಿಂದ ಸುಮಾರು ಆರು ನೂರಕ್ಕೂ ಹೆಚ್ಚು ಸಾಧು ಸಂತರ ಆಗಮನ ಆಗಮಿಸಿದ್ದಾರೆ.
ರಾಷ್ಟ್ರೀಯ ಧರ್ಮ ಸಂಸದ್‌ನ ಧಾರ್ಮಿಕ ಸಭೆ ನಾಳೆ ಸೆಪ್ಟೆಂಬರ್ 3 ರಂದು ಶ್ರೀ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷ ತೆ ವಹಿಸಲಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಪಾಲ್ಗೊಳ್ಳಲಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಸಂತರು, ಇಪ್ಪತ್ತೈದು ಸಾವಿರಕ್ಕೂ ಅಧಿಕ ಭಕ್ತ ಬಂಧುಗಳು ಅವಿಸ್ಮರಣೀಯ ರಾಷ್ಟ್ರೀಯ ಧರ್ಮಸಂಸದ್‌ಗೆ ಸಾಕ್ಷಿಯಾಗಲಿದ್ದಾರೆ.