DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿಯಲ್ಲಿ ಧರ್ಮದಂಗಲ್ – ಅನ್ಯಮತೀಯರ ವ್ಯಾಪಾರ ನಿಷೇಧಕ್ಕೆ ಒತ್ತಾಯ
ಮಂಗಳೂರು ಡಿಸೆಂಬರ್ 15 : ಕರಾವಳಿಯಲ್ಲಿ ಧರ್ಮದಂಗಲ್ ಮುಂದುವರೆದಿದ್ದು, ಇದೀಗ ಇತಿಹಾಸ ಪ್ರಸಿದ್ದ ಕುಕ್ಕೆಯ ಚಂಪಾಷಷ್ಠಿಯಲ್ಲೂ ಅನ್ಯಮತೀಯರ ವ್ಯಾಪಾರಕ್ಕೆ ವಿರೋಧ ವ್ಯಕ್ತವಾಗಿದ್ದು, ಹಿಂದೂಪರ ಸಂಘಟನೆಗಳು ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ.
ಕರಾವಳಿಯಲ್ಲಿ ಇದೀಗ ಜಾತ್ರೆಗಳ ಸೀಸನ್ ಪ್ರಾರಂಭವಾಗಿದ್ದು, ಈ ನಡುವೆ ಈಗಾಗಲೇ ಧರ್ಮದಂಗಲ್ ಪ್ರಾರಂಭವಾಗಿದೆ. ಡಿಸೆಂಬರ್ 18 ರಂದು ಕುಕ್ಕೆಯಲ್ಲಿ ಚಂಪಾ ಷಷ್ಠಿ ನಡೆಯಲಿದ್ದು, ಈ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಅಲ್ಲದೆ ಈ ಸಂಬಂಧ ಹಿಂದೂ ಸಂಘಟನೆ ಮುಖಂಡರು ದೇವಳದ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.
ಸುಬ್ರಹ್ಮಣ್ಯದ ಕುಮಾರಧಾರ ಬಳಿ ಬ್ಯಾನರ್ ಕೂಡ ಹಾಕಿದ್ದಾರೆ. ಹಿಂದೂ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯ ಅನ್ನೋ ಹೆಸರಲ್ಲಿ ಬ್ಯಾನರ್ ಹಾಕಲಾಗಿದೆ. ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯಮತೀಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಅಂತ ಬ್ಯಾನರ್ ನಲ್ಲಿ ತಿಳಿಸಲಾಗಿದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದಾಗಿದೆ.