FILM
ಧನರಾಜ್ v/s ರಜತ್ – ಕೈಮಿಲಾಯಿಸುವ ಹಂತಕ್ಕೆ ಜಗಳ
ಬೆಂಗಳೂರು ಡಿಸೆಂಬರ್ 13: ಬಿಗ್ ಬಾಸ್ ಸೀಸನ್ 11 ರಲ್ಲಿ ಬರೀ ಗಲಾಟೆ ಜಗಳವೇ ಹೆಚ್ಚಾಗಿದ್ದು, ಈಗಾಗಲೇ ಹಲ್ಲೆ ಮಾಡಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೊಗಿದ್ದಾರೆ. ಈ ನಡುವೆ ಇದೀಗ ರಜತ್ ಮತ್ತು ಧನರಾಜ್ ನಡುವೆ ಗಲಾಟೆ ಜೋರಾಗಿದ್ದು, ರಜತ್ ಧನರಾಜ್ ಮೇಲೆ ಕೈ ಮಾಡುವ ಹಂತಕ್ಕೆ ಹೋಗಿದ್ದಾರೆ.
ಕಲರ್ಸ್ ಕನ್ನಡದ ಪ್ರೋಮೋ ದಲ್ಲಿ ಧನರಾಜ್ ಮತ್ತು ರಜತ್ ಮಧ್ಯೆ ನಡೆದ ಗಲಾಟೆ ತೋರಿಸಲಾಗಿದೆ. ಅದರಲ್ಲಿ ಧನರಾಜ್ ಹಾಗೂ ರಜತ್ ಮಧ್ಯೆ ಕಿರಿಕ್ ಆಗಿದೆ. ಇದು ಬೇರೆಯದೇ ಹಂತಕ್ಕೆ ಹೋಗಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ‘ನಿನ್ನ ಮೂತಿ ಒಡೆದೇ ಹೊರಕ್ಕೆ ಹೋಗೋದು’ ಎಂದು ರಜತ್ ಅವಾಜ್ ಹಾಕಿದ್ದಾರೆ. ಅವರು ಧನರಾಜ್ ಕೈ ಮಾಡಲು ಕೂಡ ಹೋಗಿದ್ದಾರೆ. ಅವರು ಧನರಾಜ್ಗೆ ಹೊಡೆದು ಹೊರ ಹೋದರೇ ಎಂಬ ಪ್ರಶ್ನೆ ಮೂಡಿದೆ.
1 Comment