FILM
ಬಿಗ್ ಬಾಸ್ ನಲ್ಲಿ ಮೊದಲ ವಾರದಲ್ಲೇ ಕಣ್ಣೀರಿಟ್ಟ ಧನರಾಜ್ ಆಚಾರ್
ಬೆಂಗಳೂರು ಅಕ್ಟೋಬರ್ 02: ಬಿಗ್ ಬಾಸ್ ಸೀಸನ್ 11 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಿಂದ ಸ್ಪರ್ಧಿಯಾಗಿ ತೆರಳಿದ್ದ ಕಲಾವಿದ ಧನರಾಜ್ ಆಚಾರ್ ಮೊದಲ ವಾರದಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ.
ಧನರಾಜ್ ಆಚಾರ್ ಗೆ ಟಾಸ್ಕ್ ಒಂದರ ರೆಫ್ರಿಯಾಗುವ ಅವಕಾಶ ಸಿಕ್ಕಿತ್ತು, ಅದರಂತೆ ಧನರಾಜ್ ಟಾಸ್ಕ್ ನಡೆಸಿದ್ದಾರೆ. ಆದರೆ ಲಾಯರ್ ಜಗದೀಶ್ ಸೇರಿದಂತೆ ಇತರರು ಧನರಾಜ್ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಧನರಾಜ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರಮೋದಲ್ಲಿ ಧನರಾಜ್ ಕನ್ಸೆಶನ್ ರೂಮ್ ನಲ್ಲಿ ಕಣ್ಣೀರಿಟ್ಟಿದ್ದಾರೆ. ನನಗೆ ಆಗ್ತಾ ಇಲ್ಲ ಎಂದು ಧನರಾಜ್ ಕಣ್ಣಿರಿಟ್ಟಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
What is happening to dhanraj achar??#BBK11 #BBKS11 #BBKSeason11 #BiggBossKannada11 #KicchaSudeep pic.twitter.com/s4VRKJc1Vz
— KARNAM EXPLAINED (@karnam_review) October 2, 2024
You must be logged in to post a comment Login