FILM
ಮೊಸದಾಟ ಆಡಿ ಸಿಕ್ಕಿಹಾಕಿಕೊಂಡ ಧನರಾಜ್ ಆಚಾರ್ – ಮಿಡ್ ವೀಕ್ ಎಲಿಮಿನೇಷನ್…?
ಬೆಂಗಳೂರು ಜನವರಿ 16: ಬಿಗ್ ಬಾಸ್ ಸೀಸನ್ 11 ರ ಅಂತಿಮ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ ಮುಗಿಯಲಿದೆ. ಈ ನಡುವೆ ಈ ಸೀಸನ್ ನ ಕೊನೆಯ ಟಾಸ್ಕ್ ನಲ್ಲಿ ಹಲವು ಮೋಸದಾಟಗಳು ನಡೆದಿದ್ದು, ಅದರಲ್ಲಿ ಧನರಾಜ್ ಕೊನೆ ಟಾಸ್ಕ್ ನಲ್ಲಿ ಕಳ್ಳಾಟ ಆಡಿ ಸಿಕ್ಕಿಹಾಕಿಕೊಂಡಿದ್ದಾರೆ.
ಸೀಸನ್ ನ ಕೊನೆಯ ಟಾಸ್ಕ್ ‘ಕಿರಿಕ್ ಕೀ’ನಲ್ಲಿ ಧನರಾಜ್ ತಮ್ಮ ಎದುರಿಗೆ ಇದ್ದ ಕನ್ನಡಿ ನೋಡಿಕೊಂಡು ಸುಲಭವಾಗಿ ಹಲಗೆಯಲ್ಲಿ ಹಿಡಿಕೆಯನ್ನ ಧನರಾಜ್ ಸಾಗಿಸಿಬಿಟ್ಟರು. ಬಳಿಕ ಅದನ್ನು ಗ್ರೇ ಏರಿಯಾ ಅಂತ ಹೇಳಿ ತನ್ನನ್ನು ಸಮರ್ಥನೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಎಚ್ಚೆತ್ತ ಬಿಗ್ ಬಾಸ್ ನಿನ್ನೆ ನಡೆಯಬೇಕಿದ್ದ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಮಾಡಿದೆ. ಬಳಿಕ ಇದೀಗ ಬಂದ ಪ್ರೋಮೋದಲ್ಲಿ ಧನರಾಜ್ ಅವರಿಗೆ ಅವರ ಕಳ್ಳಾಟದ ಬಗ್ಗೆ ಕ್ಲಾಸ್ ತೆಗೆದುಕೊಂಡಿದೆ. ಅಲ್ಲದೆ ಮಧ್ಯರಾತ್ರಿ ಎಲಿಮಿನೇಷನ್ ನಡೆಸಿದೆ.
ಬ್ರೇಕ್ ನಂತರ ಮುಂದುವರೆಯುತ್ತಿದೆ ವಾರ ಮಧ್ಯದ ಎಲಿಮಿನೇಷನ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/0KuArbv6Wi
— Colors Kannada (@ColorsKannada) January 16, 2025