DAKSHINA KANNADA
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಪ್ರಾಣಕ್ಕಿಲ್ಲ ರಕ್ಷಣೆ, ಸುಸಜ್ಜಿತ ಆಸ್ಪತ್ರೆ ಬೇಕೆನ್ನುವ ಬೇಡಿಕೆಗೆ ಸಿಕ್ಕಿಲ್ಲ ಮನ್ನಣೆ
ಸುಬ್ರಹ್ಮಣ್ಯ, ಡಿಸೆಂಬರ್ 06: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದೆಲ್ಲೆಡೆಯಿಂದ ಭಕ್ತರು ಬರುವ ನಾಗಕ್ಷೇತ್ರ, ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಬರುವ ದೇವಾಲಯವಾಗಿದೆ. ಆದರೆ ತುರ್ತು ಚಿಕಿತ್ಸೆ ಸಿಗದೆ ಭಕ್ತರು ಸಾವನ್ನಪ್ಪುತ್ತಿರುವ ವಿಚಾರ ವಿಷಾದನಿಯಾ.
ದೇವಾಲಯಕ್ಕೆ ಬರುವ ಭಕ್ತಾಧಿಗಳ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಚಿಕಿತ್ಸೆಗೆ ಇಲ್ಲಿ ವ್ಯವಸ್ಥೆ ಇಲ್ಲ, 24×7 ಗಂಟೆ ಕಾರ್ಯನಿರ್ವಹಿಸುವ ಆಸ್ಪತ್ರೆಯ ಅಗತ್ಯತೆ ಇದ್ದು, ನಾಲ್ಕು ತಿಂಗಳ ಅಂತರದಲ್ಲಿ ತುರ್ತು ಚಿಕಿತ್ಸೆ ಸಿಗದೆ ನಾಲ್ಚರು ಭಕ್ತರ ಸಾವ್ನಪ್ಪಿದ್ದಾರೆ.
ಹೃದಯ ಸಂಬಂಧಿ, ನದಿಯಲ್ಲಿ ಮುಳುಗಿ ಸೂಕ್ತ ಚಿಕಿತ್ಸೆ ದೊರಕದೆ ಸಾವು ಸಂಭವಿಸಿದೆ. ಸುಬ್ರಹ್ಮಣ್ಯ ಸಮುದಾಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯ ಯಾವ ಸೌಲಭ್ಯವು ಇಲ್ಲ, ತುರ್ತು ಚಿಕಿತ್ಸೆಗಾಗಿ 100 ಕಿಲೋಮೀಟರ್ ದೂರದ ಮಂಗಳೂರು ಮತ್ತು 60 ಕಿಮೀ ದೂರದ ಪುತ್ತೂರನ್ನು ಅವಲಂಭಿಸಬೇಕಾದ ಅನಿವಾರ್ಯತೆ ಇದೆ.